ಏಕಮುಖ ರಸ್ತೆಗೆ ಆದೇಶ
ಬಳ್ಳಾರಿ: ಹಂಪಿ ಉತ್ಸವದ ನಿಮಿತ್ತ ರಸ್ತೆ ಸುಗಮ ಸಂಚಾರಕ್ಕಾಗಿ ಜ. 10ರಿಂದ 12ರ ವರೆಗೆ ಹಂಪಿಯ ಹಲವು ಭಾಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 115ರಡಿ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 221ಎ (2) ಮತ್ತು 5ರನ್ವಯ ಈ ಆದೇಶ ಹೊರಡಿಸಿದ್ದು, ಜನವರಿ 10ರಿಂದ 12ರ ವರೆಗೆ ಕಡ್ಡಿರಾಂಪುರದಿಂದ ಹಂಪಿ ಕಡೆಗೆ (ಹಂಪಿಯೊಳಗೆ ಪ್ರವೇಶ ಮಾತ್ರ), ಹಂಪಿಯಿಂದ ಕಮಲಾಪುರದ ಕಡೆಗೆ (ಕಮಲಾಪುರಕ್ಕೆ ಮಾತ್ರ ಪ್ರವೇಶ), ಯಂದವನವರ ಗುಡ್ಡ ಪ್ರದೇಶದಿಂದ ತಳವಾರಘಟ್ಟದ ಕಡೆಗೆ (ತಳವಾರ ಘಟ್ಟಕ್ಕೆ ಮಾತ್ರ), ತಳವಾರ ಘಟ್ಟದಿಂದ ವೆಂಕಟಾಪುರದ ಕಡೆಗೆ (ವೆಂಕಟಾಪುರಕ್ಕೆ ಮಾತ್ರ ಪ್ರವೇಶ) ಏಕಮುಖ ರಸ್ತೆ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರು, ವಾಹನ ಚಾಲಕರು ಮಾರ್ಗಸೂಚಿ ಪಾಲಿಸುವಂತೆ ಜಿಲ್ಲಾಧಿಕಾರಿ ಬಿಸ್ವಾಸ್ ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ