ಕಾರ್ಮಿಕ ಮಂತ್ರಿಯಿಂದ ಕಾನೂನು ಉಲ್ಲಂಘನೆ: ದೂರು
ಹೂವಿನಹಡಗಲಿ: ಹೈಕಕ್ಕೆ ವಿಶೇಷ ಸ್ಥಾನಮಾನ ನೀಡಿ ಕಾನೂನು ಜಾರಿಯಾಗುವ ಮುನ್ನ ಕಾರ್ಮಿಕ ಇಲಾಖೆ ಸಿಬ್ಬಂದಿ ನೇಮಕಾತಿಗೆ ಆದೇಶಿಸಿದ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕಾನೂನು ಉಲ್ಲಂಘಿಸಿದ್ದಾರೆಂದು ಎಐಟಿಯುಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ ದೂರಿದ್ದಾರೆ. ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ತಾಲೂಕು ಬಿಸಿಯೂಟ ತಯಾರಕರು ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಸಿಬ್ಬಂದಿ ನೇಮಕಾತಿ ತಡೆಯದಿದ್ದರೆ ಸಚಿವರ ಮನೆ ಮುಂದೆ ಸತ್ಯಾಗ್ರಹ, ಅವರ ಕಾರು ಅಡ್ಡಗಟ್ಟಿ ಪ್ರತಿಭಟಿಸುತ್ತೇವೆ.ಹಂಪಿ ಉತ್ಸವ ಜನೋತ್ಸವ ಪರಿಕಲ್ಪನೆಯಲ್ಲಿ ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ ಆಶಯ ಗಾಳಿಗೆ ತೂರಿದ್ದಾರೆ ಎಂದರು.