ಕೂಡ್ಲಿಗಿ: ಇಂದು ಭಕ್ತಿಗೀತೆಗಳ ಸೀಡಿ ಬಿಡುಗಡೆ ಕಾರ್ಯಕ್ರಮ
ಕೂಡ್ಲಿಗಿ: ಕೂಡ್ಲಿಗಿ ಗಂಗಾಮಾತೆ ಆಡಿಯೋ ಪ್ರಥಮ ಬಾರಿಗೆ ತಾಲೂಕಿನ ಮೊರಬದ ವೀರಭದ್ರೇಶ್ವರ ಸ್ವಾಮಿ ಕುರಿತ ಮೊರಬದ ಸಿರಿವರ ಭಕ್ತಿಗೀತೆಗಳ ಧ್ವನಿಸುರುಳಿ ಹೊರತಂದಿದ್ದು, ಸೀಡಿ ಬಿಡುಗಡೆ, ಚೌಡಾಪುರ ಕೊಡ್ಲಿಮಠದ ದಿ. ವೀರಭದ್ರಯ್ಯ ರಚಿತ ಶ್ರೀ ವೀರಭದ್ರೇಶ್ವರ ಸ್ತುತಿ, ಸಂಕಲ್ಪ ವಚನಗಳ ಕಿರುಹೊತ್ತಿಗೆ ಬಿಡುಗಡೆ ಜ. 5ರ ಬೆಳಗ್ಗೆ 10ಕ್ಕೆ ಮೊರಬದಲ್ಲಿ ನಡೆಯಲಿದೆ. ಸಿರಿವರ ಧ್ವನಿ ಸುರುಳಿಗೆ ಲೇಖಕ ಭೀಮಣ್ಣ ಗಜಾಪುರ, ಕೆ.ಎಂ. ವೀರೇಶ್ ಸಾಹಿತ್ಯ ರಚಿಸಿದ್ದು, ಮನೋರಂಜನ್ ಪ್ರಭಾಕರ್, ಎಂ.ಎಸ್. ಮಾರುತಿ ಸಂಗೀತ ಸಂಯೋಜಿಸಿದ್ದಾರೆ. ಗಾಯಕರಾದ ಅಜಯ್ ವಾರಿಯರ್, ಅನುರಾಧ ಭಟ್, ಸ್ನೇಹಾ, ಕೆ.ಎಂ. ವೀರೇಶ್, ಭೀಮಸಮುದ್ರ ಪೂಜಾ ಹಾಡಿದ್ದಾರೆ. ಆರ್ಥಿಕ ನೆರವಿತ್ತ ಬಳ್ಳಾರಿ ಸಿ.ಎಂ. ವೀರೇಂದ್ರಕುಮಾರ್, ಎಸ್.ಎಸ್. ಹಿರೇಮಠ್, ಸಿ. ಕರಿಯಮ್ಮ ಭರಮಪ್ಪ, ಬಣವಿಕಲ್ಲು ಎರ್ರಿಸ್ವಾಮಿ ಭಾಗವಹಿಸಲಿದ್ದಾರೆ. ಜ. 6ಕ್ಕೆ ವೀರಭದ್ರೇಶ್ವರ ರಥೋತ್ಸವ ನಡೆಯಲಿದೆ.