ಕೂಡ್ಲಿಗಿ: ಬಿಸಿಯೂಟ ಕಾರ್ಯಕರ್ತರಿಂದ ಪ್ರತಿಭಟನೆ
ಕೂಡ್ಲಿಗಿ: ಪಟ್ಟಣದಲ್ಲಿ ತಾಲೂಕಿನ ಬಿಸಿಯೂಟ ಕಾರ್ಯಕರ್ತೆಯರು ಶನಿವಾರ ಎಐಟಿಯುಸಿ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ರಸ್ತೆತಡೆ, ಜೈಲ್ ಭರೋ ಚಳವಳಿ ನಡೆಸಿದರು. ಗಾಂಧೀಜಿ ಚಿತಾಭಸ್ಮ ಸ್ಮಾರಕದಿಂದ ಮೆರವಣಿಗೆಯಲ್ಲಿ ಸಾಗಿದ ನೂರಾರು ಬಿಸಿಯೂಟ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮದಕರಿ ವೃತ್ತದದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ರಸ್ತೆತಡೆ ನಡೆಸಿದರು. ಎಐಟಿಯುಸಿ ತಾಲೂಕಾಧ್ಯಕ್ಷ ಬಿ. ಸಿದ್ದಲಿಂಗಪ್ಪ ಮಾತನಾಡಿ, ಕಾಯಮಾತಿ, ಸಕಲ ಸೇವಾ ಭದ್ರತೆ, ಮಾಸಿಕ ರು. 5 ಸಾವಿರ ಸಂಬಳ, ಪಿಂಚಣಿ ಇತ್ಯಾದಿ ಬೇಡಿಕೆ ಈಡೇರಿಸಿ ಎಂದರು. ಎಚ್. ವೀರಣ್ಣ, ನೂರಾರು ಮಹಿಳೆಯರು ಇದ್ದರು.