ಗ್ರಂಥಾಲಯ ಉನ್ನತೀಕರಿಸಲು ಸರ್ಕಾರಕ್ಕೆ ಪ್ರಸ್ತಾವನೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಪಂ ಗ್ರಂಥಾಲಯ ಉನ್ನತಿಕರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವೆ, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ರು. 15 ಲಕ್ಷ ನೀಡುವುದಾಗಿ ಶಾಸಕ ಎಸ್. ಭೀಮಾನಾಯ್ಕ ತಿಳಿಸಿದರು. ತಂಬ್ರಹಳ್ಳಿ ಗ್ರಂಥಾಲಯ ಮೇಲ್ವಿಚಾರಣೆ ಸಮಿತಿ ಆಯೋಜಿಸಿದ್ದ ಗ್ರಾಮದ ಗ್ರಂಥಾಲಯ ರಜತಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಬಡಿಗೇರ ನಿಂಗಮ್ಮ, ಮಮತಾ ಸುರೇಶ, ರೋಗಾಣಿ ಹುಲುಗಪ್ಪ, ಅಕ್ಕಿ ತೋಟೇಶ, ಕ್ಯಾದಿಗಿಹಳ್ಳಿ ಲಕ್ಷ್ಮವ್ವ, ಉಪ್ಪಾರ ಬಾಲಪ್ಪ, ಪಿ. ಸುರೇಶ, ಬಣಕಾರ ಕೊಟ್ರೇಶ್, ಖಾದರಸಾಬ್, ದ್ಯಾಮಜ್ಜ, ಸುಣಗಾರ ಮಂಜುನಾಥ, ಗೋವಿಂದ್, ಹುಸೇನಭಾಷ ಇತರರು ಇದ್ದರು.