ಮಲ್ಲಿಕಾರ್ಜುನಗೆ ಉತ್ತಮ ಸಂಘಟಕ ಪ್ರಶಸ್ತಿ
ಹೂವಿನಹಡಗಲಿ: 2013ನೇ ಸಾಲಿನ ಪುಟಾಣಿ ವಿಜ್ಞಾನ ಬಳಗ ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ತಾಲೂಕಿನ ನಂದಿಹಳ್ಳಿ ಸರ್ಕಾರಿ ಆಶ್ರಮ ಶಾಲೆ ಶಿಕ್ಷಕ ಕೆ.ಎಂ. ಮಲ್ಲಿಕಾರ್ಜುನ ರಾಷ್ಟ್ರ ಮಟ್ಟದ ಉತ್ತಮ ಸಂಘಟಕ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಮಾರ್ಗದರ್ಶನದಲ್ಲಿ ಈ ಶಾಲೆ ವಿದ್ಯಾರ್ಥಿಗಳಾದ ಎಚ್. ಸಾಕಮ್ಮ ರಾಷ್ಟ್ರ ಮಟ್ಟದ 6ನೇ ರ್ಯಾಂಕ್, ಜಿ. ಸುನೀಲ್ ನಾಯ್ಕ ರಾಜ್ಯ ಮಟ್ಟದ 5ನೇ ರ್ಯಾಂಕ್ ಪಡೆದಿದ್ದಾರೆ. ಇತರ ಮಕ್ಕಳು ಜಿಲ್ಲಾ, ತಾಲೂಕು ಮಟ್ಟದ ರ್ಯಾಂಕ್ ಪಡೆದಿದ್ದು, ಶಾಲೆ ಸಾಧನೆಗೆ 2013ನೇ ಶಕ್ತಿ ವರ್ಷದ ವಿಶೇಷ ಪುರಸ್ಕಾರವಾಗಿ ಆಶ್ರಮ ಶಾಲೆಗೆ ರಾಷ್ಟ್ರ ಮಟ್ಟದ ಉತ್ತಮ ಶಾಲೆ ಪ್ರಶಸ್ತಿ ಸಹ ನೀಡಲಾಗಿದೆ.