ರೋಟರಿ ಕ್ಲಬ್ನಿಂದ ಫ್ಯಾನ್ ದೇಣಿಗೆ
ಬಳ್ಳಾರಿ: ಇಲ್ಲಿನ ರೋಟರಿ ಕ್ಲಬ್ ಕಂಟೋನ್ಮೆಂಟ್ ನಗರದ ವಡ್ಡರಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಫ್ಯಾನ್ಗಳನ್ನು ದೇಣಿಗೆಯಾಗಿ ನೀಡಿತು. ರೋಟರಿ ಕ್ಲಬ್ನ ಸಬ್ಬಿಮ್ಯಾಥಿವ್ ಫ್ಯಾನ್ಗಳನ್ನು ದೇಣಿಗೆ ನೀಡಿ ನಂತರ ಮಾತನಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಪ್ರಮುಖ ಜವಾಬ್ದಾರಿ ಶಿಕ್ಷಕರ, ಪೋಷಕರ ಮೇಲಿದೆ. ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ದೇಣಿಗೆ ನೀಡಲು ಸಂಘ, ಸಂಸ್ಥೆಗಳು ಮುಂದೆ ಬರಬೇಕು ಎಂದರು. ರೋಟರಿ ಕ್ಲಬ್ ಖಜಾಂಚಿ ಬಿ. ರಾಮಕೃಷ್ಣ, ಸದಸ್ಯ ವಸ್ತೀಮಲ್, ಶಾಲೆಯ ಮುಖ್ಯಶಿಕ್ಷಕ ವಿ.ಎಚ್. ಭರತೇಶ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.