ವಿದ್ಯಾರ್ಥಿನಿ ಪ್ರತಿಭಾ ಕಾಣೆ: ಪ್ರಕರಣ ದಾಖಲು
ಬಳ್ಳಾರಿ: ತಾಲೂಕಿನ ಪಿ.ಡಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರತಿಭಾ ಎಂಬ ವಿದ್ಯಾರ್ಥಿನಿ ಕಾಣೆಯಾಗಿದ್ದಾಳೆ. ಜ. 1ರಂದು ಮಧ್ಯಾಹ್ನ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಶಾಲೆಯಿಂದ ಹೋದವಳು ಹಿಂತಿರುಗಿಲ್ಲ ಎಂದು ಬಾಲಕಿ ತಂದೆ ಕೆ. ಬಸವರಾಜ ದೂರು ನೀಡಿದ್ದಾರೆ. 4.5 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಹಸಿರು, ಕೆಂಬಣ್ಣದ ಚೂಡಿದಾರ ಧರಿಸಿದ್ದಾಳೆ. ಕನ್ನಡ, ತೆಲುಗು ಮಾತನಾಡುತ್ತಾಳೆ. ಈಕೆ ಬಗ್ಗೆ ಸುಳಿವು ಸಿಕ್ಕವರು ದೂ. 08392-265010, 276461, 256100, ಮೊ. 9480803052, 9480803031 ಅಥವಾ ಸಮೀಪದ ಠಾಣೆ ಸಂಪರ್ಕಿಸಬೇಕೆಂದು ಪ್ರಕರಣ ದಾಖಲಿಸಿಕೊಂಡ ಎಂದು ಪಿ.ಡಿ. ಹಳ್ಳಿ ಠಾಣೆ ಪಿಎಸ್ಐ ಮನವಿ ಮಾಡಿದ್ದಾರೆ.