ವಿವಿಧ ಬೇಡಿಕೆ ಈಡೇರಿಕೆಗೆ ಬಿಸಿಯೂಟ ತಯಾರಕರ ಆಗ್ರಹ
ಹೂವಿನಹಡಗಲಿ: ಕೇಂದ್ರ ಸರ್ಕಾರ ನಿತ್ಯ ಇಂಧನ ಬೆಲೆ ಏರಿಕೆ ಮಾಡುತ್ತಿದೆ. ಆದರೆ, ಬಿಸಿಯೂಟ ತಯಾರಿಕರ ಗೌರವಧನ ಹೆಚ್ಚಳದ ಬಗ್ಗೆ ಕಾಳಜಿ ವಹಿಸದೆ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಎಐಟಿಯುಸಿ ತಾಲೂಕು ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ ಆರೋಪಿಸಿದರು. ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ತಾಲೂಕು ಬಿಸಿಯೂಟ ತಯಾರಕರ ಫೆಡರೇಷನ್ದಿಂದ ನಡೆದ ರಾಸ್ತಾ ರೋಕೋ ಚಳವಳಿಯಲ್ಲಿ ಮಾತನಾಡಿದ ಅವರು, ಬಿಸಿಯೂಟ ತಯಾರಕರಿಗೆ ತಿಂಗಳಿಗೆ ರು. 10 ಸಾವಿರ ಗೌರವಧನ ನೀಡಿ ಅರೆಕಾಲಿಕ ಕೆಲಸಗಾರರೆಂದು ಘೋಷಿಸಬೇಕು. ಸೇವಾ ಅವಧಿ ಪರಿಗಣಿಸಬೇಕು,. 25 ಮಕ್ಕಳಿಗೆ ಒಬ್ಬರಂತೆ ಬಿಸಿಯೂಟ ತಯಾರಿಕರನ್ನು ನೇಮಿಸಬೇಕು. ಇಎಸ್ಐ ಭವಿಷ್ಯ ನಿಧಿ ಯೋಜನೆ ಜಾರಿ, ರು. 50 ಸಾವಿರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಆಗ್ರಹಿಸಿದರು. ಕಸಾಪ ಅಧ್ಯಕ್ಷ ಸುರೇಶ ಅಂಗಡಿ, ಕರವೇ ತಾಲೂಕಾಧ್ಯಕ್ಷ ಎಂ. ಜಗದೀಶ ಮಾತನಾಡಿದರು.