ಶತಾಯುಷಿ ಅಜ್ಜಿ ಗಂಗಮ್ಮ ನಿಧನ
ಹಗರಿಬೊಮ್ಮನಹಳ್ಳಿ: ತಾಲೂಕಿನ ವಲ್ಲಭಾಪುರ ಗ್ರಾಮದ ಶತಾಯುಷಿ ಬಾರಿಕರ ಗಂಗಮ್ಮ(110) ಶನಿವಾರ ನಿಧನರಾಗಿದ್ದಾರೆ. ಮೃತರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು, 80ಕ್ಕೂ ಹೆಚ್ಚು ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಬಂಧುಗಳು ಇದ್ದಾರೆ. ಶಾಸಕ ಭೀಮನಾಯ್ಕ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು ಮೃತ ಶತಾಯುಷಿ ಅಜ್ಜಿಗೆ ಸಂತಾಪ ಸೂಚಿಸಿದ್ದಾರೆ.