ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶಿಕ್ಷಣದಿಂದ ಬದಲಾವಣೆ: ಆರ್.ಎಸ್. ಪಾಟೀಲ್

Rashmi Kasaragodu
Updated On : 5 Jan 2014, 1:09 am

ಹೂವಿನಹಡಗಲಿ: ಕಾಡಿನ ಹುಲಿಗಳಿಗಿಂತ ನಮ್ಮ ಸುತ್ತಮುತ್ತಲಿನ ಹುಲಿಗಳು ತೀರಾ ಅಪಾಯಕಾರಿಯಾಗಿದ್ದು, ಇವರನ್ನು ಶಿಕ್ಷಣದ ಮೂಲಕ ಬದಲಾಯಿಸಬೇಕಿದೆ ಎಂದು ಡಿವೈಎಸ್ಪಿ ಆರ್.ಎಸ್. ಪಾಟೀಲ್ ಹೇಳಿದರು. ತಾಲೂಕಿನ ಗುಜನೂರು ಗ್ರಾಮದಲ್ಲಿ ಸೊಪ್ಪಿನ ಕಾಳಮ್ಮ ಸರ್ಕಾರ ಪಪೂ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಂಕರ್ ಬೆಟಗೇರಿ ತಂಡ ನೀರಿನ ಸದ್ಬಳಕೆ, ದುಶ್ಚಟಗಳ ಬಗ್ಗೆ ಪ್ರಹಸನದಿಂದ ಅರಿವು ಮೂಡಿಸುವ ಕಾರ್ಯಕ್ರಮ ಗಮನ ಸೆಳೆಯಿತು. ಮೆಹಬೂಬ್ ಬೆಟಗೇರಿ ಸಂಗೀತ ಪ್ರಸ್ತುತಪಡಿಸಿದರು. ಡಾ. ಚಿದಾನಂದ ರೆಡ್ಡಿ, ಡಾ. ನಾಗವತ್ ನೇಮ್ಯಾನಾಯ್ಕ ಜಾನುವಾರು ತಪಾಸಣೆ ನಡೆಸಿದರು. ಎನ್. ಸಾಬುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಅಂಗಡಿ, ಮಲ್ಕಿಒಡೆಯರ್ ನಾಗರಾಜ, ವಿ.ಬಿ. ಜಗದೀಶ, ಮಂಜುನಾಥ ಭೋವಿ, ಜಿ. ದೇವಪ್ಪ, ಆರ್. ಗುಲಾಬ್ಸಿಂಗ್, ಬಿ. ಅಂಜಿನಪ್ಪ, ಕೆ. ಹನುಮಂತಪ್ಪ, ಸರಸ್ವತಿ, ದೇವಮ್ಮ, ಲತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement