ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುವರ್ಣ ಮಹೋತ್ಸವ: ಪೂರ್ವಸಿದ್ಧತಾ ಸಭೆ

Rashmi Kasaragodu
Updated On : 5 Jan 2014, 1:10 am

ಕುರುಗೋಡು: ಪಟ್ಟಣದ ಸರ್ಕಾರಿ ಪಪೂ ಕಾಲೇಜಿಗೆ 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸುವರ್ಣ ಮಹೋತ್ಸವ ಅಚರಣೆ ಕುರಿತು ಕಾಲೇಜಿನಲ್ಲಿ ಪೂರ್ವಸಿದ್ಧ್ದತಾ ಸಭೆ ನಡೆಯಿತು.
ಕಾಲೇಜು ಉಪ ಪ್ರಾಚಾರ್ಯ ಎಚ್. ರವೀಂದ್ರ ಮಾತನಾಡಿ, ಕಾಲೇಜು 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ  ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಹಕರಿಸುವಂತೆ ತಿಳಿಸಿದರು. ಪುರಾತನ ಕಾಲದಿಂದಲೂ ಐತಿಹಾಸಿಕ, ಪೌರಾಣಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮಹತ್ವ ಪಡೆದಿರುವ ಕುರುಗೋಡು, ಪಟ್ಟಣದಲ್ಲಿ 1963ರಲ್ಲಿ ತಾಲೂಕು ಬೋರ್ಡ್ ಒಡೆತನದಲ್ಲಿ ಪ್ರಾರಂಭವಾಗಿದ್ದ ಶಾಲೆ ನಂತರದ ದಿನಗಳಲ್ಲಿ ಸರ್ಕಾರಿ ಪ್ರೌಢಶಾಲೆಯಾಗಿ ಪರಿವರ್ತನೆಗೊಂಡು ನಾಡಗೌಡ ಮರಿಬಸವನಗೌಡರ ಸ್ಮಾರಕ ಸರ್ಕಾರಿ ಪದವಿಪೂರ್ವ ಕಾಲೇಜು ಎಂದು ಕರೆಸಿಕೊಂಡಿದೆ ಎಂದು ಶಿಕ್ಷಣ ಸಂಯೋಜಕ ಕೆ. ಗಾದಿಲಿಂಗಪ್ಪ ಹೇಳಿದರು.
ಕೆ. ಬಸಪ್ಪ ಅವರು ನಾಡಗೌಡರ ಜಯದೇವಗೌಡ ಅವರನ್ನು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದರು. ಇದಕ್ಕೆ ಎಲ್ಲರು ಧ್ವನಿಗೂಡಿಸಿ ಒಮ್ಮತ ಸೂಚಿಸುವ ಮೂಲಕ ಹಿರಿಯ ಮುಖಂಡ ನಾಡಗೌಡರ ಜಯದೇವಗೌಡರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಬಿಇಒ ಅಶೋಕ್ಕುಮಾರ ಶಿಂಧಿಗಿ, ಪ್ರಾಚಾರ್ಯ ವೇಣುಗೋಪಾಲ ರೆಡ್ಡಿ, ಸೋಮಶೇಖರ ಗೌಡ, ಸಿ. ಯುವರಾಜ, ಟಿ. ಮಲ್ಲಿಕಾರ್ಜುನ, ತೆಂಗಿನ ಮಲ್ಲೇಶಪ್ಪ, ಚಾನಳ ಆನಂದ, ತೆಂಗಿನ ಸುರೇಶಪ್ಪ, ಟಿ. ಸಿದ್ದಪ್ಪ, ಎನ್. ಶ್ರೀನಿವಾಸ, ಕುಮಾರ, ಮಹಮದ್ಖಾನ್, ಹುಸೇನಬಾಷಾ, ಅಲ್ಲಾಸಾಬ್, ಕೆ.ಎಂ. ಲೋಕೇಶ, ಬಸವರಾಜ, ಅಭಿ, ಮಬಾಷಾ, ಟಿ. ವಿನೋದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement