ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ ಗ್ರಾಮ ಸ್ವಚ್ಛತೆ
ಹೂವಿನಹಡಗಲಿ: ಕಲುಷಿತ ನೀರು ತ್ಯಾಜ್ಯ ವಸ್ತುಗಳು ತುಂಬಿಕೊಂಡಿದ್ದ ಚರಂಡಿಗಳನ್ನು ಜಿಬಿಆರ್ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತೆ ಮಾಡುವ ಮೂಲಕ ಜನರಲ್ಲಿ ನೈರ್ಮಲೀಕರಣ ಜಾಗೃತಿ ಮೂಡಿಸಿದರು.
ಹೂವಿನಹಡಗಲಿ ಪಟ್ಟಣದ ಜಿಬಿಆರ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಡಿ ತಾಲೂಕಿನ ಹುಗಲೂರನ್ನು ದತ್ತು ಗ್ರಾಮವನ್ನಾಗಿ ತೆಗೆದುಕೊಂಡು 7 ದಿನಗಳಿಂದ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಸ್ತೆ, ಚರಂಡಿಗಳನ್ನು ಸ್ವಚ್ಛ ಮಾಡುವ ಮೂಲಕ ಸಾರ್ವಜನಿಕರಲ್ಲಿ ಸೇವಾ ಮನೋಭವನೆ ಅರಿವು ಮೂಡಿಸಿದರು.
ಗ್ರಾಮದಲ್ಲಿ ಚರಂಡಿಗಳು ಹೊಲಸು ತುಂಬಿಕೊಂಡು ನಾನಾ ಸಾಂಕ್ರಾಮಿಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ. ಹೂಳಿನಿಂದ ತುಂಬಿದ್ದ ಚಂರಡಿಗಳನ್ನು ಶಿಬಿರಾರ್ಥಿಗಳು ಸ್ವಚ್ಛತೆ ಮಾಡಿದರು. ಗ್ರಾಮದ ಮುಖ್ಯ ಬೀದಿಗಳಲ್ಲಿ ಪರಿಸರ ಜಾಗೃತಿ ಹಾಗೂ ಏಡ್ಸ್ ಜಾಗೃತಿ ಆಂದೋಲನಾ ಜಾಥಾಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.