ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜನಪರ ಕಾರ್ಯಕ್ಕೆ ಜೆಸಿಐ ಮುಂದು: ಬಾಷಾ

Lingaraj Badiger
Updated On : 7 Jan 2014, 12:20 pm

ಕೂಡ್ಲಿಗಿ: ಕೂಡ್ಲಿಗಿಯನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸುವ ಪಣ ತೊಟ್ಟಿದ್ದು, ಜನೋಪಯೋಗಿ ಕಾರ್ಯಕ್ರಮಗಳಿಗೆ ಜೆಸಿಐ ಸಂಸ್ಥೆ ಸದಾ ಮುಂದಾಗಿರುತ್ತದೆ ಎಂದು ಜೆಸಿಐ ಗೋಲ್ಡನ್ ಸಂಸ್ಥೆ ನೂತನ ಅಧ್ಯಕ್ಷ ಎಂ. ಜಿಲಾನ್‌ಬಾಷಾ ತಿಳಿಸಿದರು.
ಪಟ್ಟಣದ ಸಮುದಾಯ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, 2005ರಲ್ಲಿ ಆರಂಭಗೊಂಡ ಸಂಸ್ಥೆಯಲ್ಲಿ ಹಿಂದಿನ ಅವಧಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉತ್ತಮ ಕಾರ್ಯಗಳನ್ನು ಮಾಡಿ ಮುನ್ನಡೆಸಿದ್ದಾರೆ. ಅದರಂತೆ ಈ ಬಾರಿ ಸಂಸ್ಥೆ ವತಿಯಿಂದ ಕಣ್ಣಿನ ಶಸ್ತ್ರಚಿಕಿತ್ಸೆ, ರಕ್ತದಾನ, ಹೃದಯ ತಪಾಸಣಾ ಶಿಬಿರ, ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಉಚಿತವಾಗಿ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಪಿಎಸ್‌ಐ ಕೃಷ್ಣನಾಯ್ಕ ಮಾತನಾಡಿ, ಸಂಘ, ಸಂಸ್ಥೆಗಳು ಉತ್ತಮ ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುವುದರಿಂದ ಅಲ್ಲಿಯೂ ಜನತೆಗೆ ಅನಾನುಕೂಲತೆ ಹೆಚ್ಚು. ಇಂಥ ಸ್ಥಳಗಳಲ್ಲಿ ತಮ್ಮ ಸಂಸ್ಥೆ ವತಿಯಿಂದ ಕಾರ್ಯ ಚಟುವಟಿಕೆ ನಡೆಸುವಂತಾಗಲಿ ಎಂದರು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ರಾಮಣ್ಣ ವಾರ್ಷಿಕ ವರದಿ ವಾಚಿಸಿದರು. ವಲಯಾಧ್ಯಕ್ಷ ರಾಜಾಭಕ್ಷಿ, ಉಪಾಧ್ಯಕ್ಷ ಕೆ.ಎಸ್. ಬಾದಾಮಿ, ಚಂದ್ರಾಮಪ್ಪ, ಸಂದೀಪ್, ರಾಜೇಶ್, ಎಂ.ಡಿ. ಜಿಲಾನ್, ವೀರೇಶ್, ರಿಜ್ವಾನ್, ಮಹಿಳಾ ಘಟಕಾಧ್ಯಕ್ಷೆ ಜಾಸ್ಮೀನ್ ಜಿಲಾನ್, ಕಾರ್ಯದರ್ಶಿ ವಲದಪ್ಪ, ನಾಗರಾಜ, ಸಪ್ತಗಿರಿ, ಮಾಲತೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement