ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರೆಡ್‌ಕ್ರಾಸ್‌ಗೆ ದೇವಣ್ಣ ಆಯ್ಕೆ

Lingaraj Badiger
Updated On : 7 Jan 2014, 12:27 pm

ಬಳ್ಳಾರಿ: ರೆಡ್‌ಕ್ರಾಸ್ ಸಂಸ್ಥೆ ಸದಸ್ಯರಾಗಿರುವ ದೇವಣ್ಣ ಅವರು ರಾಜ್ಯ ಮಟ್ಟದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಪ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದೇ ಪ್ರಥಮ ಬಾರಿಗೆ ಜಿಲ್ಲೆಯ ರೆಡ್‌ಕ್ರಾಸ್ ಸಂಸ್ಥೆ ಪದಾಧಿಕಾರಿಯೊಬ್ಬರು ರಾಜ್ಯ ಮಟ್ಟದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಸಂಸ್ಥೆ ಕಾರ್ಯದರ್ಶಿ ಡಾ. ನಿಜಾಮುದ್ದೀನ್ ತಿಳಿಸಿದ್ದಾರೆ.
ನಿರುದ್ಯೋಗಿಗಳಿಗೆ ತರಬೇತಿ
ಬಳ್ಳಾರಿ: ಭಾರತ ಸರ್ಕಾರದ ಎಂಎಸ್‌ಎಂಇ  ಡೆವೆಲಪ್‌ಮೆಂಟ್ ಸಂಸ್ಥೆಯು ವಿದ್ಯಾವಂತ ಯುವ ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ 5 ದಿನಗಳ ಅರೇಕಾ ಲೀಫ್ ಪ್ಲೇಟ್ಸ್ ಆಂಡ್ ಕಪ್ಸ್, ಪೇಪರ್ ಕಪ್ಸ್ ಆಂಡ್ ಪ್ಲೇಟ್ಸ್ ಉದ್ಯಮ ಕುರಿತು ತರಬೇತಿ ನೀಡಲಿದೆ.
ತರಬೇತಿಯು ಜನವರಿ 27ರಿಂದ 31ರ ವರಗೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಹೆಚ್ಚಿನ ವಿದ್ಯಾರ್ಹತೆ ಹೊಂದಿದ ಅರೇಕಾ ಲೀಫ್ ಪ್ಲೇಟ್ಸ್ ಆಂಡ್ ಕಪ್ಸ್, ಪೇಪರ್ ಕಪ್ಸ್ ಆಂಡ್ ಪ್ಲೇಟ್ಸ್ ಉದ್ಯಮ ಪ್ರಾರಂಭಿಸಲಿಚ್ಛಿಸುವವರು ತರಬೇತಿ ಪಡೆಯಬಹುದು.
ಅರೇಕಾ ಲೀಫ್ ಪ್ಲೇಟ್ಸ್ ಆಂಡ್ ಕಪ್ಸ್, ಪೇಪರ್ ಕಪ್ಸ್ ಆಂಡ್ ಪ್ಲೇಟ್ಸ್ ತಯಾರಿಕೆಯ ಪ್ರಾಯೋಗಿಕ ತರಬೇತಿ ನೀಡುವುದಲ್ಲದೆ ತಯಾರಿಕೆಯಲ್ಲಿ ಬಳಸಬಹುದಾದ ಕಚ್ಚಾ ಸಾಮಗ್ರಿ, ಈ ಉದ್ಯಮದಲ್ಲಿ ಕಾಯ್ದುಕೊಳ್ಳಬಹುದಾದ ಗುಣಮಟ್ಟ ಮತ್ತಿತರ ವಿಷಯಗಳಲ್ಲಿ ತರಬೇತಿ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳನ್ನು ನಿರ್ದೇಶಕರು, ಎಂಎಸ್‌ಎಂಇ ಡೆವೆಲಪ್‌ಮೆಂಟ್ ಇನ್‌ಸ್ಟಿಟ್ಯೂಟ್, ರಾಜಾಜಿನಗರ, ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು-10 ಇವರಿಗೆ ಸಲ್ಲಿಸಬೇಕು ಅಥವಾ ಉಪ ನಿರ್ದೇಶಕರಾದ ವಿ.ವಿ. ಪ್ರಸಾದ್ ಅಸಿಸ್ಟೆಂಟ್ ಡೈರೆಕರ್ ಜೆ ಆಂಡ್ ಸಿ) ಕಂದಸ್ವಾಮಿ ಅಥವಾ   ದೂರವಾಣಿ: 080-23151281-3, ಮೊ: 8971828533ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
9ರಂದು ಅಹವಾಲು ಸ್ವೀಕಾರ
ಬಳ್ಳಾರಿ: ಧಾರವಾಡದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಜ. 9ರಂದು ಬಳ್ಳಾರಿಯ ಕ್ಯಾಂಪ್ ಕಾರ್ಯಾಲಯದಲ್ಲಿ ಮಾಜಿ ಸೈನಿಕರ ಹಾಗೂ ಅವರ ಅವಲಂಬಿತರಿಂದ ಕುಂದು ಕೊರತೆ, ಅಹವಾಲು ಸ್ವೀಕರಿಸಲಾಗುವುದು ಹಾಗೂ ವಾರ್ಷಿಕ ಪರಿಹಾರಧನದ ಫಲಾನುಭವಿಗಳಿಗೆ ಧನಾದೇಶಗಳನ್ನು ವಿತರಿಸಲಾಗುವುದು.
ಜಿಲ್ಲೆಯ ಆಸಕ್ತ ಮಾಜಿ ಸೈನಿಕರು, ಅವರ ಅವಲಂಬಿತರು ತಮ್ಮ ಮೂಲ ಸೇನಾ ದಾಖಲೆಗಳು ಹಾಗೂ ಇಲಾಖೆಯಿಂದ ನೀಡಿದ ಗುರುತಿನ ಚೀಟಿಯೊಂದಿಗೆ ಅಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರೊಳಗಾಗಿ ಆಗಮಿಸಿ ಅಹವಾಲುಗಳನ್ನು ಸಲ್ಲಿಸಬಹುದು ಹಾಗೂ ಧನಾದೇಶಗಳನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುವರ್ಣ ಮಹೋತ್ಸವ:ದೂರವಾಣಿ ಸಂಪರ್ಕಿಸಿ
ಬಳ್ಳಾರಿ: 50 ವಸಂತಗಳನ್ನು ಪೂರೈಸಿರುವ ಸ್ಥಳೀಯ ವೀವಿ ಸಂಘದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸುವರ್ಣ ಮಹೋತ್ಸವವನ್ನು ಶೀಘ್ರದಲ್ಲೇ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಹಳೆಯ ವಿದ್ಯಾರ್ಥಿಗಳು (ಆಹ್ವಾನ ಪತ್ರ ಕಳುಹಿಸಲು) ತಮ್ಮ ವಿಳಾಸ ಮತ್ತು ಮಾಹಿತಿ ನೀಡಲು ಹಳೇ ವಿದ್ಯಾರ್ಥಿಗಳ ಸಂಘದ ದೂರವಾಣಿ ಸಂಖ್ಯೆ: 08392-258434, ಮೊ: 9448792759, 9902782180, 8951694485ಗೆ ಸಂಪರ್ಕಿಸುವಂತೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ವಿ.ವಿ. ಗೌಡ ಹಾಗೂ ಸಂಘದ ಕಾರ್ಯದರ್ಶಿ ವಿ.ಎಂ. ರಾಜಶೇಖರಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜಿಲ್ಲೆಗೆ ಸಿಗಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಭಾಗ್ಯ: ವಿಶ್ವನಾಥ ಅಡಿಗ

ಕೊಟ್ಟೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಂದಿನ ಬಾರಿ ಬಳ್ಳಾರಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಆರು ದಶಕಗಳಿಂದ ಸಾಹಿತ್ಯದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಗೆ ಮಾನ್ಯತೆ ನೀಡಬೇಕು ಎಂದು ಕಥೆಗಾರ ವಿಶ್ವನಾಥ ಅಡಿಗ ಒತ್ತಾಯಿಸಿದ್ದಾರೆ.
ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, 1958ರಲ್ಲಿ ಬಳ್ಳಾರಿಯಲ್ಲಿ ವಿ.ಕೃ. ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಂದಿನಿಂದ ಇಂದಿನವರೆಗೆ ಸಮ್ಮೇಳನ ಜಿಲ್ಲೆಯಿಂದ ಪದೇ ಪದೇ ದೂರ ಹೋಗುತ್ತಲೆ ಇದೆ. 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿ ಜಿಲ್ಲೆಯಲ್ಲಿ ನಡೆಸಲು ಕಸಾಪ ರಾಜ್ಯಧ್ಯಕ್ಷರು ಸೇರಿದಂತೆ ಕಸಾಪ ಪದಾಧಿಕಾರಿಗಳು ದೃಢನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಬಳ್ಳಾರಿ ಜಿಲ್ಲೆ ಹೆಸರಾಂತ ಸಾಹಿತಿ, ಕಥೆಗಾರರನ್ನು ಹೊಂದಿದೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ, ಕಳೆದ ಸಾಹಿತ್ಯ ಸಮ್ಮೇಳಾನಾಧ್ಯಕ್ಷ ಕೋ. ಚನ್ನಬಸಪ್ಪ, ಮುದೇನೂರು ಸಂಗಣ್ಣ, ಇಟಿಗಿ ಈರಣ್ಣ, ಚಂದ್ರಶೇಖರಯ್ಯ ಶಾಸ್ತ್ರಿ ಅವರಂತಹ ದಿಗ್ಗಜರು ಸಾಹಿತ್ಯದ ಕೃಷಿಯನ್ನು ಕೈಗೊಂಡಿದ್ದಾರೆ. ಇಂತವರ ತಾಣವಾದ ಜಿಲ್ಲೆಗೆ ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ನೀಡಬೇಕಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಈಗಲಾದರೂ ಆಗಲಿ ಎಂದು ಹೇಳಿದರು.
ಸಮ್ಮೇಳನ ನಡೆಸುವ ನಿಟ್ಟಿನಲ್ಲಿ ಕಳೆದ ಬಾರಿ ನಡೆದ ಸಭೆಯಲ್ಲಿ ಒಂದು ಮತದ ಕೊರತೆ ಜಿಲ್ಲಾ ಕಸಾಪ ಅಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿಗೆ ಉಂಟಾಗಿತ್ತು. ಮಡಿಕೇರಿಯಲ್ಲಿ ನಡೆಯಲಿರುವ ಈ ಬಾರಿಯ ಸಮ್ಮೇಳನದಲ್ಲಿ ಅದು ಪುನರಾವರ್ತನೆಯಾಗದೆ ಜಿಲ್ಲೆಗೆ ದೊರಕಬೇಕು. ಈ ನಿಟ್ಟಿನತ್ತ ಜಿಲ್ಲಾ ಕಸಾಪ ಅಧ್ಯಕ್ಷ ಎಲ್ಲ ಬಗೆಯ ತಯಾರಿ ಮಾಡಿಕೊಂಡು ಸಭೆಯಲ್ಲಿ ತಮ್ಮ ಹಕ್ಕು ಪತ್ರಿಪಾದನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement