ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಿಎಸ್ಸೆಸ್ ಪುಣ್ಯಸ್ಮರಣೆ: ಕವಿಗಾನ ಗಾಯನ ಕಾರ್ಯಕ್ರಮ

Lingaraj Badiger
Updated On : 8 Jan 2014, 1:14 am

ಬಳ್ಳಾರಿ: ಕಾರಂತ ರಂಗಲೋಕ ಸಂಸ್ಥೆಯಿಂದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೊತ್ತಲಚಿಂತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿ.ಎಸ್. ಶಿವರುದ್ರಪ್ಪ ಅವರ ಪುಣ್ಯಸ್ಮರಣೆ ನಿಮಿತ್ತ ಕವಿಗಾನ ಗಾಯನ ಕಾರ್ಯಕ್ರಮ ಜರುಗಿತು.
ಹಿರಿಯ ಸಾಹಿತಿ ಬಿ. ಪಂಪಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸ್ವಚ್ಛಗೊಳಿಸುವ ಸಲುವಾಗಿ ಮಕ್ಕಳಲ್ಲಿ ಶಿಕ್ಷಣಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಪ್ರಜ್ಞೆ ಬೆಳಸಬೇಕಾಗಿದೆ. ಅಂತಹ ಪ್ರಯತ್ನದಲ್ಲಿ ಸಂಸ್ಥೆ ಮುನ್ನಡೆಯಲಿ ಎಂದರು.
ಕಾರಂತ ರಂಗಲೋಕ ಸಂಸ್ಥೆ ಕಾರ್ಯದರ್ಶಿ ಆರ್.ಪಿ. ಮಂಜುನಾಥ್, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಬರೆದ ಕವನಗಳು, ಕೃತಿಗಳು ಹಾಡು ಹಾಗೂ ಕಥೆಗಳಾಗಿ ಎಲ್ಲರ ಮನಸ್ಸಿನಲ್ಲಿ ಸದಾಕಾಲ ಹಸಿರಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.
ಶಾಲೆ ಮುಖ್ಯಸ್ಥ ವೀರೇಶಗೌಡ, ಶಿಕ್ಷಕರಾದ ಕೋಟ್ರೇಶ್, ಮೌನೇಶ್ ಮತ್ತು ಸಂಸ್ಥೆ ಪದಾಧಿಕಾರಿಗಳಾದ ಆರ್. ಭೀಮನಗೌಡ, ಡಿ.ಎಂ. ಯಲ್ಲಪ್ಪ, ಶರಣಬಸವ, ವಿ. ಮೃತ್ಯುಂಜಯ, ಕಾಳಿಂಗ ಮತ್ತಿತರರು ಭಾಗವಹಿಸಿದ್ದರು. ಕಾಮಾಕ್ಷಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ನಾಗರಾಜ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement