ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಂಪಿ ಉತ್ಸವ: ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

Lingaraj Badiger
Updated On : 8 Jan 2014, 1:07 am

ಬಳ್ಳಾರಿ/ ಹೊಸಪೇಟೆ: ಜ. 10ರಿಂದ 3 ದಿನ ನಡೆಯಲಿರುವ ಹಂಪಿ ಉತ್ಸವದಲ್ಲಿ ಈ ಬಾರಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ರಾಜ್ಯ ಹಾಗೂ ಅಂತರ್ ರಾಜ್ಯಗಳಿಂದ ಆಗಮಿಸುವ ಕಲಾವಿದರು ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ಡಿಸಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ.
ಉತ್ಸವದ ಶ್ರೀ ವಿದ್ಯಾರಣ್ಯ ಹಾಗೂ ಶ್ರೀ ಹಕ್ಕ-ಬುಕ್ಕ ವೇದಿಕೆಗಳಲ್ಲಿ ನಡೆಯಲಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ದಿನ, ಸಮಯ ಹಾಗೂ ಕಲಾವಿದರ ವಿವರ ಇಂತಿದೆ.
ಶ್ರೀ ವಿದ್ಯಾರಣ್ಯ ವೇದಿಕೆ: ವೇದಿಕೆ ಎದುರು ಬಸವಣ್ಣ ಮಂಟಪದ ಬಳಿ ಸಜ್ಜುಗೊಳಿಸಿರುವ ವೇದಿಕೆಯಲ್ಲಿ ಜ. 10ರ ಸಂಜೆ 6ಕ್ಕೆ ಬೆಂಗಳೂರಿನ ಆರಾಧನಾ ನೃತ್ಯ ಶಾಲೆಯಿಂದ ಸಮೂಹ ನೃತ್ಯ, 6.30ಕ್ಕೆ ಬೆಂಗಳೂರಿನ ಗೀತಾ ಎಸ್. ಹೆಬ್ಳಿಕರ್ರಿಂದ ಸುಗಮ ಸಂಗೀತ, 7ಕ್ಕೆ ಹೊಸಪೇಟೆ ಕಾಕುಬಾಳು ಗ್ರಾಮದ ಕೆ. ಸಣ್ಣತಿಮ್ಮಪ್ಪ ಕ್ಲಾರಿಯೋನೆಟ್ ವಾದನ, 7.30ಕ್ಕೆ ಮಂಜಮ್ಮ ಜೋಗತಿಯಿಂದ ಜೋಗತಿ ನೃತ್ಯ, 8ಕ್ಕೆ ಹಡಗಲಿಯ ಕೆ. ವನಜಾಕ್ಷಿ ಕನ್ನಡ ಗೀತೆಗಳು, 8.30ಕ್ಕೆ ನಾಡೋಜ ಬೆಳಗಲ್ಲು ವೀರಣ್ಣರಿಂದ ಬಾಪು ಕುರಿತು ತೊಗಲುಗೊಂಬೆ ಪ್ರದರ್ಶನ, 9ಕ್ಕೆ ಬೆಂಗಳೂರಿನ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ಶ್ರೀ ರಾಮಚರಿತೆ ನೃತ್ಯ ರೂಪಕ, 9.30ಕ್ಕೆ ಹೊಸಪೇಟೆಯ ಯಲ್ಲಪ್ಪ ಭಂಡಾರದರಿಂದ ಜಾನಪದ ಗೀತೆಗಳು, 10ಕ್ಕೆ ದರ್ಶಿನಿ ಮಂಜುನಾಥ ನಿರ್ದೇಶನದಲ್ಲಿ ಬೆಂಗಳೂರಿನ ನೃತ್ಯ, ದಿಶಾ ಟ್ರಸ್ಟ್ನಿಂದ ಅಷ್ಟಲಕ್ಷ್ಮೀ ಜಗನ್ ಮೋಹನನೇ ಕೃಷ್ಣ ಕುರಿತು ನೃತ್ಯ ರೂಪಕ, 10ಕ್ಕೆ ಗೋಣಿ ಬಸಪ್ಪರಿಂದ ಜನಪದ ಗೀತೆ, ಮಧ್ಯರಾತ್ರಿ 12ಕ್ಕೆ ಹಡಗಲಿಯ ರಂಗಭಾರತಿ ತಂಡದಿಂದ ವಾರ್ಡ್ ನಂ. 6 ನಾಟಕ ಪ್ರದರ್ಶನ ನಡೆಯಲಿದೆ.
11ರಂದು ಸಂಜೆ 6ಕ್ಕೆ ಬಳ್ಳಾರಿಯ ಜಿಲಾನಿ ಬಾಷಾ ಸಂಗಡಿಗರಿಂದ ಸಮೂಹ ನೃತ್ಯ, 6.30ಕ್ಕೆ ಕೆ. ಸುಧಾರ ಕರ್ನಾಟಕ ಸಂಗೀತ, 7ಕ್ಕೆ ತುಮಕೂರಿನ ಬಾಲಾ ವಿಶ್ವನಾಥರಿಂದ ಭರತ ನಾಟ್ಯ, 7.30ಕ್ಕೆ ಬೆಂಗಳೂರಿನ ಗಾಯತ್ರಿ ಶ್ರೀಧರ್ ಸುಗಮ ಸಂಗೀತ, 8ಕ್ಕೆ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ರ ಹಾಸ್ಯ, 8.30ಕ್ಕೆ ಹ.ಬೊ. ಹಳ್ಳಿ ಕೋಗಳಿಯ ಎಚ್.ಎಂ. ಶಂಕರಯ್ಯ ಸುಗಮ ಸಂಗೀತ, 9ಕ್ಕೆ ಬಳ್ಳಾರಿಯ ನಾಡೋಜ ಸುಭದ್ರಮ್ಮ ಮನ್ಸೂರ್ ಮತ್ತು ಮರಿಯಮ್ಮನಹಳ್ಳಿಯ ಡಾ. ಕೆ. ನಾಗರತ್ನಮ್ಮರಿಂದ ರಂಗ ಗೀತೆಗಳು, 10ಕ್ಕೆ ಹೊಸಪೇಟೆಯ ಶ್ರೀಅಂಜಲಿ ಭರತನಾಟ್ಯ ಕಲಾ ಕೇಂದ್ರದಿಂದ ನೃತ್ಯ, 10.30ಕ್ಕೆ ಮೋಹನ್ ಕಲ್ಬುರ್ಗಿ ಅವರಿಂದ ವಾಯೋಲಿನ್ ವಾದನ, 11ಕ್ಕೆ ರಾಮನಗರದ ಎಂ.ಸಿ. ಸುಜೇಂದ್ರ ಬಾಬು ಸಂಗಡಿಗರಿಂದ ಅನ್ನಮಾಚಾರ್ಯ, ಸಂಕೀರ್ತನ ಕೂಚಿಪುಡಿ ನೃತ್ಯ, 11.15ಕ್ಕೆ ಗುಲ್ಬರ್ಗದ ಜಸ್ವಿರ್ ಸಿಂಗ್ ಸಂಗಡಿಗರಿಂದ ಹಿಂದಿ ಮತ್ತು ಕನ್ನಡ ಗಾಯನ ನೃತ್ಯ, 12ಕ್ಕೆ ಗಾದಿಗನೂರಿನ ಕೆ.ಎಂ. ಹಾಲಪ್ಪ ತಂಡದಿಂದ ರಕ್ತರಾತ್ರಿ ನಾಟಕ.
ಜ. 12ರ ಸಂಜೆ 6ಕ್ಕೆ ಬಳ್ಳಾರಿಯ ಕಾಳಿದಾಸರ ಮಾತನಾಡುವ ಮಂಗ, 6.30ಕ್ಕೆ ಅಭಿಷೇಕ್ ಸಂಗಡಿಗರಿಂದ ಕೂಚಿಪುಡಿ ನೃತ್ಯ, 7ಕ್ಕೆ ಬೆಂಗಳೂರಿನ ರಾಗಿಣಿ ನಾಗರಾಜ್ ಸಂಗಡಿಗರಿಂದ ದಶಾವತಾರ ನೃತ್ಯ ರೂಪಕ, 7.30ಕ್ಕೆ ಕೊಪ್ಪಳದ ಯಮನೂರಪ್ಪ ಎಸ್. ಭಜಂತ್ರಿ ಅವರಿಂದ ತತ್ವಪದಗಳು, 8ಕ್ಕೆ ಹೊಸಪೇಟೆಯ ಕೇಶವ್ರಾಜ್ ಅವರಿಂದ ಕೊಳಲು ವಾದನ, 8.30ಕ್ಕೆ ಧಾರವಾಡದ ಡಾ. ಜಯದೇವಿ ಜಂಗಮ ಶೆಟ್ಟಿ ಅವರಿಂದ ವಚನಗಾಯನ, 9ಕ್ಕೆ ಹೊಸಪೇಟೆಯ ಇಮ್ತಿಯಾಜ್ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, 9.30ಕ್ಕೆ ಸತೀಶ್ ಬಾಬು ನಿರ್ದೇಶನದಲ್ಲಿ ಶ್ರೀ ನಾಟ್ಯೇಶ್ವರ ನೃತ್ಯ ಶಾಲೆಯಿಂದ ಗೊಂಬೆ ವೈಭವ, 10ಕ್ಕೆ ಬೆಂಗಳೂರಿನ ವೆಂಕಟೇಶ್ ಅಲ್ಕೋಡ್ರಿಂದ ವಚನ ಗಾಯನ, 10.30ಕ್ಕೆ ಹೊಸಪೇಟೆಯ ಜೀವನ್ ವಾಲಿಕರ್ ಮತ್ತು ಹಡಗಲಿಯ ಪರಶುರಾಮ್ರಿಂದ ಜನಪದ ಗೀತೆಗಳು, 11ಕ್ಕೆ ಬೆಂಗಳೂರಿನ ಬಿ.ಕೆ. ಅನಂತರಾವ್ರಿಂದ ಕೊಳಲು ವಾದನ, 11-15ಕ್ಕೆ ಅಶೋಕ್ಕುಮಾರ್ ನಿರ್ದೇಶನದಲ್ಲಿ ಬೆಂಗಳೂರಿನ ನ್ಯಾಟ್ಯಾಂಜಲಿ ಟ್ರಸ್ಟ್ನಿಂದ ಶಕ್ತಿ ನೃತ್ಯರೂಪಕ, ಮಧ್ಯರಾತ್ರಿ 12ಕ್ಕೆ ಚಿತ್ರದುರ್ಗದ ಜಮುರಾ ಸುತ್ತಾಟ ಅವರಿಂದ ತಲ್ಲಣಿಸದಿರು ಕಂಡ್ಯಾ ತಾಳು ಮನವೆ ನಾಟಕ ಪ್ರದರ್ಶನ ಜರುಗಲಿದೆ.
ಶ್ರೀ ಹಕ್ಕ-ಬುಕ್ಕ ವೇದಿಕೆ: ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿರುವ ವೇದಿಕೆಯಲ್ಲಿ ಮಹಿಳಾ ಉತ್ಸವ, ಕವಿಕಾವ್ಯ ಗಾಯನ, ಮಕ್ಕಳ ಉತ್ಸವ ಹಾಗೂ ವಿಕಲಚೇತನರ ಉತ್ಸವ ಜರುಗಲಿದ್ದು, ಜ. 10ಕ್ಕೆ ನಡೆಯಲಿರುವ ಮಹಿಳಾ ಉತ್ಸವದಲ್ಲಿ ಮಧ್ಯಾಹ್ನ 3ಕ್ಕೆ ಮಹಿಳೆಯರಿಂದ ರಂಗೋಲಿ, ಮೆಹಂದಿ ಸ್ಪರ್ಧೆ, ಸಂಜೆ 4ಕ್ಕೆ ಬಳ್ಳಾರಿಯ ವೀಣಾ ಕಟಕನಹಳ್ಳಿರಿಂದ ಹಿಂದೂಸ್ತಾನಿ ಗಾಯನ, 4.30ಕ್ಕೆ ಗದಗ್ನ ಮೇಘಾ ಹುಕ್ಕೇರಿ ಅವರಿಂದ ಸುಗಮ ಸಂಗೀತ, 5ಕ್ಕೆ ಬೆಂಗಳೂರಿನ ಕುಮಾರಿ ಸ್ನೇಹಲತಾರಿಂದ ಕರ್ನಾಟಕ ಸಂಗೀತ, 5.15ಕ್ಕೆ ಗದಗ್ನ ಭಾರತಿ ಡಂಬಳ ತಂಡದವರಿಂದ ಮಹಿಳಾ ನಾಟಕ, 5.30ಕ್ಕೆ ಕಂಪ್ಲಿ ಬಿ. ಲಕ್ಷ್ಮಿ ಅವರಿಂದ ಭರತನಾಟ್ಯ, 5.45ಕ್ಕೆ ಬೆಂಗಳೂರಿನ ಗೌರಿ ಸಾಸ್ತಾನ ತಂಡದಿಂದ ಮಹಿಳಾ ಯಕ್ಷಗಾನ, 6ಕ್ಕೆ ಹೊಸಪೇಟೆಯ ಸ್ವರ್ಣಮುಖಿ ಭರತನಾಟ್ಯ ಶಾಲೆಯಿಂದ ಭರತನಾಟ್ಯ.
ಜ. 11ಕ್ಕೆ ಬೆಳಗ್ಗೆ 10.30ಕ್ಕೆ ಹಂಪಿ ಕನ್ನಡ ವಿವಿಯ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ಕವಿ-ಕಾವ್ಯ ಗಾಯನ, ಸಂಜೆ 4ರ ಮಕ್ಕಳ ಉತ್ಸವದಲ್ಲಿ ಬೆಳಗಾವಿ ಜಿ. ಕಿತ್ತೂರಿನ ರಜತ್ ರಾಜೇಶ್ ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಗಾಯನ, 4.14ಕ್ಕೆ ಗುಲ್ಬರ್ಗದ ಶ್ರದ್ಧಾ ಎಸ್. ಪಾಟೀಲ್ರಿಂದ ಯೋಗ ಪ್ರದರ್ಶನ, 4.30ಕ್ಕೆ ಬಳ್ಳಾರಿಯ ಕು. ಪ್ರಹ್ಲಾದ್ ಮತ್ತು ಅನುಕೃಪ ರೌಡೂರ್ರಿಂದ ಸುಗಮ ಸಂಗೀತ, 4.45ಕ್ಕೆ ಶ್ರೀವತ್ಸ ಹೆಮ್ಮಾಡಿರಿಂದ ಜಾದೂ, 5ಕ್ಕೆ  ಶ್ರೀರಕ್ಷಿತ ಲಹರಿಯಿಂದ ಭರತನಾಟ್ಯ, 5.15ಕ್ಕೆ ಭಾಗ್ಯಶ್ರೀ ಹೂಗಾರ್ರಿಂದ ವಚನ ಗಾಯನ ನಡೆಯಲಿದೆ.
ಜನವರಿ 12ರಂದು ಸಂಜೆ 3ಕ್ಕೆ ವಿಕಲಚೇತನರ ಉತ್ಸವ ಜರುಗಲಿದ್ದು, ಬಳ್ಳಾರಿಯ ಕೆ. ದೊಡ್ಡಬಸವ ಗವಾಯಿರಿಂದ ಸುಗಮ ಸಂಗೀತ, 3.15ಕ್ಕೆ ಹೊಸಪೇಟೆಯ ಎಸ್. ಪಾಂಡುನಾಯ್ಕ ಅವರಿಂದ ಹಿಂದೂಸ್ತಾನಿ ಗಾಯನ, ಬಳ್ಳಾರಿ ಕಿವುಡ ಮತ್ತು ಮೂಕ ಶಾಲೆಯಿಂದ ಸಮೂಹ ನೃತ್ಯ, 4.15ಕ್ಕೆ ಹೊಸಪೇಟೆಯ ಸಾಗರ್ ಹುಸೇನ್ ಪೀರ್ ಅವರಿಂದ ತಬಲಾ ವಾದನ, 4.45ಕ್ಕೆ ಬಳ್ಳಾರಿ ನಿರಾಶ್ರಿತ ಪರಿಹಾರ ಕೇಂದ್ರದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement