ಲಾರಿ ಹರಿದು ಚಾಲಕ ಸಾವು
ಹೊಸಪೇಟೆ: ರಸ್ತೆ ಬದಿಯ ಮರದ ಕೆಳಗೆ ಮಲಗಿದವನ ಮೇಲೆ ಲಾರಿಯೊಂದು ಹರಿದು ಹೋಗಿದ್ದರಿಂದ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಾರಿಗನೂರು ಗ್ರಾಮದ ಸಮೀಪದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಎಣ್ಣೆ ವಡಿಗೇರಿ ಗ್ರಾಮದ ನಿವಾಸಿ ಅಂಬಲಪ್ಪ (38) ಮೃತನಾಗಿರುವ ಲಾರಿ ಚಾಲಕ. ಲಾರಿ ಚಾಲಕನಾಗಿ ಕಾರ್ಯನಿರ್ವಹಿಸುವಾಗ ಕೆಲ ಸಮಯ ರಸ್ತೆ ಬದಿಯ ಮರದ ಕೆಳಗೆ ಮಲಗಿದಾಗ ಬೇರೆ ಲಾರಿಯೊಂದು ಹಿಂಬದಿಯಿಂದ ಸಂಚರಿಸಿದ್ದರಿಂದ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.