ಉತ್ಸವ: ಮೆಚ್ಚುಗೆ ಪಡೆದ ವಿಜ್ಞಾನ ವಸ್ತುಪ್ರದರ್ಶನ
ಹಂಪಿ: ಉತ್ಸವದಲ್ಲಿ ವಿಜ್ಞಾನ ಪರಿಚಯಿಸುವ ವಿಜ್ಞಾನ ವಸ್ತುಪ್ರದರ್ಶನ ಜನರ ಮೆಚ್ಚುಗೆ ಪಡೆಯಿತು. ಪ್ರಥಮ ಬಾರಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕತ್ತಲೆ ಕೋಣೆಯಲ್ಲಿ ತಾರಾಲಯ ಪ್ರದರ್ಶನ, ಚಂದ್ರ, ವಿವಿಧ ಗ್ರಹ, ಹುಣ್ಣಿಮೆ, ಅಮಾವಾಸ್ಯೆ, ಮನುಷ್ಯನ ಮೆದುಳು, ಹೃದಯ, ಕಿಡ್ನಿ, ದೊಡ್ಡ ಕರಳು, ಸಣ್ಣ ಕರಳು, ತಾಯಿ ಗರ್ಭದಲ್ಲಿ ಜನನಕ್ಕೆ ಸಿದ್ಧವಾದ ಮಗು, ಅಸ್ತಿಪಂಜರ. ದೇಶ, ವಿದೇಶದ ಹವ್ಯಾಸಿ ಖಗೋಳ ವೀಕ್ಷಣೆದಾರರು ಟೆಲಿಸ್ಕೋಪ್ ಬಳಿಸಿ ಆಕಾಶಕಾಯಗಳ ದರ್ಶನವನ್ನು ಸಂಜೆ 5ರಿಂದ ರಾತ್ರಿ 12ರ ವರೆಗೆ ತೋರಿಸಿದರು. ಆರ್ಗೆಟ್ ಗೇಮ್ಸ್ನಲ್ಲಿ ಚಾಕೋ ಹಟ್ ಕ್ರೀಡೆ, ಬೈಕ್, ಕಾರ್ ರೇಸ್, ಗನ್ ಗೇಮ್, ಎಕ್ಸ್ಬಾಕ್ಸ್ ಸೇರಿದಂತೆ ಇತರೆ ಕ್ರೀಡೆ ಮುದ ನೀಡಿದವು.