ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಉತ್ಸವದಲ್ಲಿ ಗಮನ ಸೆಳೆದ ಮ್ಯಾಜಿಕ್ ಗೊಂಬೆ

Rashmi Kasaragodu
Updated On : 12 Jan 2014, 1:44 am

 ಹಂಪಿ: ಉತ್ಸವದಲ್ಲಿ ಮ್ಯಾಜಿಕ್ ಗೊಂಬೆ ಮಾರಾಟ ಭರದಿಂದ ಸಾಗಿತ್ತು. ಬೆಂಗಳೂರಿನ ಮಾಗಡಿ ಬಳಿಯ ಗೊಳ್ಳರಹಟ್ಟಿ ಕಲಾವಿದ ವಿಕಲಚೇತನ ಶಿವಣ್ಣ ಗೊಂಬೆ ಮಾರಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾನೆ. ಉತ್ಸವದಲ್ಲಿ ರಸ್ತೆಬದಿ ಈತನ ಮಕ್ಕಳ ಮ್ಯಾಜಿಕ್ ಗೊಂಬೆಗಳ ಮಾರಾಟ ಜೋರಾಗಿತ್ತು. ಶಿವಣಮ್ಯಾಜಿಕ್ ಗೊಂಬೆಗಳನ್ನು ಕೊಲ್ಕತ್ತಾದಲ್ಲಿ ತಂದು ಉತ್ಸವ, ಸಮ್ಮೇಳನ, ಜಾತ್ರೆ ಸೇರಿದಂತೆ ಜನಸಾಗರ ಸೇರುವ ಪ್ರದೇಶದಲ್ಲಿ ಮಾರಾಟಕ್ಕೆ ಸಿದ್ಧನಾಗಿರುತ್ತಾನೆ. ವಿಕಲಚೇತನನಾದ ಶಿವಣ್ಣನು ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ರು. 20ಗೆ ಎರಡು ಗೊಂಬೆ ಮಾರಾಟ ಮಾಡಿ ದಿನಕ್ಕೆ ರು. 300-500ಗೆ ಸಂಪಾದನೆ ಮಾಡುತ್ತಿದ್ದಾನೆ.



ಚಳಿ ಬಿಡಿಸಿದ ಬೆಂಗಳೂರಿನ ಆಕ್ಸಿಜನ್ ತಂಡದ ನೃತ್ಯ



ಹಂಪಿ:  ಬೆಂಗಳೂರಿನ ಕಸ್ತೂರಿ ಶಂಕರ್ ಅವರ ಸುಗಮ ಸಂಗಿತ ಕಾರ್ಯಕ್ರಮ ಕೇಳುಗರ ಮನಸ್ಸಿಗೆ ಮುದ ನೀಡಿತು. ಮುಂಬೈನ ಶಬರಿ ಬ್ರದರ್ಸ್ ಖವ್ವಾಲಿ, ಗಜಲ್ ಹಾಡಿದರೆ, ಯುವಪಡೆಯನ್ನು ಹುಚ್ಚೆಬ್ಬಿಸಿ ಕುಣಿಸಿದ್ದು ಬೆಂಗಳೂರಿನ ಆಕ್ಸಿಜನ್ ತಂಡದ ನೃತ್ಯ. ಚಳಿಯಲ್ಲಿ ಶೋತೃಗಳನ್ನು ಹಿಡಿದಿಟ್ಟಿಡಿದ್ದು ಶಾನ್ ಅವರ ಹಾಡುಗಳು. ಕಸ್ತೂರಿ ಶಂಕರ್ರ ಸುಗಮ ಸಂಗೀತ ಜನರನ್ನು ಆಕರ್ಷಿಸಿದರು. ಶಬರಿ ಬ್ರದರ್ಸ್ ಜೋಡಿ ಖವ್ವಾಲಿ, ಗಜಲ್ ಗಮನ ಸೆಳೆದವು. ಬೆಂಗಳೂರಿನ ಆಕ್ಸಿಜನ್ ತಂಡದ ನೃತ್ಯ ಯುವಕರ ಮನಸ್ಸನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಇಂಥ ನೃತ್ಯಕ್ಕೆ ಸಂಪ್ರದಾಯಸ್ಥರು ಬೇಸರ ವ್ಯಕ್ತಪಡಿಸಿದ್ದುಂಟು. ರಾತ್ರಿ ಚಳಿ ಬಿಸಿದ್ದು ಮುಂಬೈನ ಶಾನ್ ಅವರ ಹಿಂದಿ, ಕನ್ನಡ ಗೀತೆಗಳ ಗಾಯನ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement