ಎಬಿಸಿಡಿ ಡ್ಯಾನ್ಸ್: ಹಂಪಿ ಉತ್ಸವ ವಿಶೇಷ
ಹಂಪಿ: ಮನಸ್ಸಿಗೆ ಬಂದಂತೆ ಕುಣಿತ, ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಹಾಡಿನ ವ್ಯವಸ್ಥೆಯನ್ನು ಹಂಪಿ ಉತ್ಸವ ಸಮಿತಿ ಮಾಡುತ್ತದೆ. ಈ ಬಾರಿ ಉತ್ಸವದಲ್ಲಿಎಬಿಸಿಡಿ ಎನಿ ಬಡಿ ಕ್ಯಾನ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಯಾರಾದರೂ ಹೋಗಿ ಡ್ಯಾನ್ಸ್ ಮಾಡಬಹುದು, ಹೀಗೇನೆ ಡ್ಯಾನ್ಸ್ ಮಾಡಬೇಕೆಂದಿಲ್ಲ, ತಮಗೆ ಬಂದಂತೆ ಡ್ಯಾನ್ಸ್ ಮಾಡಬಹುದು. ಬಾಲಕರು, ಬಾಲಕಿಯರು, ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗಿ ಹಾಡಿಗೆ ಡ್ಯಾನ್ಸ್ ಮಾಡಿ ಸಂತೋಷ ಪಟ್ಟರು. ಶುಕ್ರವಾರ ಎಬಿಸಿಡಿ ಡ್ಯಾನ್ಸ್ ರು. 20 ಪ್ರವೇಶ ಶುಲ್ಕ ನಿಗದಿಪಡಿಸಿದ್ದರಿಂದ ಜನ ಡ್ಯಾನ್ಸ್ಗೆ ಮುಂದಾಗದ ಹಿನ್ನೆಲೆಯಲ್ಲಿ ಸಿಎಂ ಆದೇಶದ ಮೇರೆಗೆ ಈ ಕಾರ್ಯಕ್ರಮಕ್ಕೆ ಶುಲ್ಕ ರದ್ದು ಮಾಡಲಾಗಿತ್ತು.