ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದಸರಾ ಉತ್ಸವದಂತೆ ಹಂಪಿ ಉತ್ಸವಕ್ಕೂ ಮೆರುಗು ತನ್ನಿ

Rashmi Kasaragodu
Updated On : 12 Jan 2014, 1:46 am


ಹಂಪಿ: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಹಂಪಿ ಉತ್ಸವದಲ್ಲೂ ಹೆಚ್ಚು ಜನರು ಭಾಗವಹಿಸುವ ಮೂಲಕ ಈ ಉತ್ಸವಕ್ಕೆ ಮೆರುಗು ತರಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಹಂಪಿ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಂಪಿ ಉತ್ಸವ ಅದ್ಭುತ ಸಂಸ್ಕೃತಿ, ಇತಿಹಾಸ, ಪರಂಪರೆ ಸಾರಿ ಹೇಳುವಂಥ ಉತ್ಸವ. ಹಂಪಿ ಗ್ರಾಪಂ ವ್ಯಾಪ್ತಿಯ ವಿಶ್ವವಿಖ್ಯಾತ ಹಂಪಿಯಲ್ಲಿ ಹಂಪಿ ಉತ್ಸವ ನಡೆಯುತ್ತಿರುವುದು ನನಗೆ ಹೆಮ್ಮೆ ವಿಷಯ. ಗ್ರಾಮ ಪಂಚಾಯಿತಿ ಮಟ್ಟದ ಹಂಪಿಯಲ್ಲಿ ಜಾಗತಿಕ ಉತ್ಸವ ನಡೆಯುತ್ತಿದೆ.
ವಿಜಯನಗರ ಕಾಲದಲ್ಲಿ ನಿರ್ಮಿಸಿರುವ ಇಲ್ಲಿನ ನೀರಾವರಿ ಕಾಲುವೆಗಳು ವಿಶ್ವದ ನೀರಾವರಿ ತಜ್ಞರನ್ನು ಅಚ್ಚರಿಗೊಳಿಸಿವೆ. ಮಿಷನರಿ ಯಂತ್ರಗಳು, ಸಿಮೆಂಟ್ ಇಲ್ಲದ ಕಾಲದಲ್ಲಿ ಅದ್ಭುತವಾದ ನೀರಾವರಿ ವ್ಯವಸ್ಥೆ ನಿರ್ಮಿಸುವ ಮೂಲಕ ವಿಶ್ವವನ್ನೇ ಬೆರಗುಗೊಳಿಸಿವೆ. ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ 371(ಜೆ) ಕಲಂನಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಕಾಯ್ದೆಯಲ್ಲಿ ಉದ್ಯೋಗ ಮೀಸಲಾತಿ ನೀಡಲಾಗುತ್ತಿದೆ. 371(ಜೆ) ಕಲಂ ಅನ್ನು ಶಾಸನ ರೂಪದಲ್ಲಿ ಜಾರಿಗೆ ತರುವ ಮೂಲಕ ಈ ಭಾಗದ ಭಾಗ್ಯದ ಬಾಗಿಲು ತೆರೆದಿದೆ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತದ ಹಂಪಿ ಉತ್ಸವ ನನಗೆ ಪ್ರಥಮ ಉತ್ಸವವಾಗಿದೆ. ಉತ್ಸವದಲ್ಲಿ ಆದ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ಹಂಪಿ ಉತ್ಸವದಲ್ಲಿ ಯಾವುದೇ ರೀತಿಯ ಲೋಪಗಳು ಉಂಟಾಗದಂತೆ ಎಚ್ಚರಿಕೆ ವಹಿಸುವ ಮೂಲಕ ಮುಂದಿನ ವರ್ಷ ವಿಜಯನಗರದ ಗತವೈಭವ ನೆನಪಿಸುವಂತೆ ಹಂಪಿ ಉತ್ಸವ ಆಚರಿಸಲಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಜಿಪಂ ಅಧ್ಯಕ್ಷೆ ಶೋಭಾ ಬೆಂಡಗೇರಿ, ಸದಸ್ಯೆ ಸುನಂದಾ ಬಾಯಿ, ಕೊಪ್ಪಳ ಜಿಪಂ ಅಧ್ಯಕ್ಷ ಜನಾರ್ದನ, ದೀಪಕ್ಕುಮಾರ್ ಸಿಂಗ್, ಡಿಸಿ ಎ.ಎ. ಬಿಸ್ವಾಸ್, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಜಿಪಂ ಸಿಇಒ ಮಂಜುನಾಥ ನಾಯ್ಕ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement