ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಾರ್ತಾ ಇಲಾಖೆ ಪ್ರದರ್ಶನಕ್ಕೆ ಪರಮೇಶ್ವರ ನಾಯ್ಕ ಚಾಲನೆ

Rashmi Kasaragodu
Updated On : 12 Jan 2014, 1:45 am

ಹಂಪಿ: ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ಸಾಧನೆ, ರಾಜ್ಯದ ವಿವಿಧ ಯೋಜನೆಗಳ ಮಾಹಿತಿಯ ವಾರ್ತಾ ಇಲಾಖೆಯ ಪ್ರದರ್ಶನ ಮಳಿಗೆಗೆ ಸಚಿವ ಪರಮೇಶ್ವರ ನಾಯ್ಕ ಚಾಲನೆ ನೀಡಿದರು. ಪಂಪ, ಜ್ಞಾನಪೀಠ, ಭಾರತರತ್ನ ಪ್ರಶಸ್ತಿಗೆ ಭಾಜನರಾದ ಕನ್ನಡಿಗರು, ಮೊಹರೆ ಹನುಮಂತರಾಯ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರ ಭಾವಚಿತ್ರಗಳು, ಅವರ ಸಾಧನೆಗಳ ಕಿರುಚಿತ್ರ ಪರಿಚಯ, ಶಾಲಾ ಮಕ್ಕಳು, ಜನರಿಗೆ ನಾಡ ಸೇವಕರ ಮಾಹಿತಿ ಅನಾವರಣಗೊಳಿಸಿತು. ಜಿಪಂ ಅಧ್ಯಕ್ಷ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್, ಶಾಸಕ ಅನಿಲ್ ಲಾಡ್, ಹಂಪಿ ಗ್ರಾಪಂ ಅಧ್ಯಕ್ಷೆ ಸ್ವಾತಿ ಸಿಂಗ್, ಡಿಸಿ ಬಿಸ್ವಾಸ್, ಮಂಜುನಾ ಥ ನಾಯಕ್, ವಸಂತ್ ಇದ್ದರು.


ಲಾಠಿ ಹಿಡಿದ ಬಳ್ಳಾರಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್


ಹಂಪಿ:  ಡಿಸಿ ಎ.ಎ. ಬಿಸ್ವಾಸ್ ಲಾಠಿ ಹಿಡಿಯುವುದು ವಿಶೇಷವಲ್ಲ. ಹಲವು ಸಂದರ್ಭದಲ್ಲಿ ಲಾಠಿ ಹಿಡಿದು ಪೊಲೀಸರ ಕೆಲಸವನ್ನು ಇವರೇ ಮಾಡಿದ್ದುಂಟು. ಹಂಪಿ ಉತ್ಸವದಲ್ಲೂ ಬಿಸ್ವಾಸ್ ಲಾಠಿ ಹಿಡಿದು, ಕಿಡಿಗೇಡಿಗಳಿಗೆ ಲಾಠಿ ರುಚಿ ತೋರಿದರು. ಶ್ರೀಕೃಷ್ಣದೇವರಾಯ ಮುಖ್ಯವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೇಳೆ ಕಿಡಿಗೇಡಿಗಳು, ವಿಐಪಿ ಗ್ಯಾಲರಿಯಲ್ಲಿದ್ದವರ ಮೇಲೆ ಪೇಪರ್ ಇತ್ಯಾದಿ ತೂರಾಡಿ, ಅನುಚಿತವಾಗಿ ವರ್ತಿಸಿದ್ದರು. ಪೊಲೀಸರಿದ್ದರೂ ಅನುಚಿತವಾಗಿ ವರ್ತಿಸಿದ್ದರಿಂದ ಕುಪಿತರಾದ ಡಿಸಿ, ಅಲ್ಲೇ ಪೊಲೀಸ್ ಅಧಿಕಾರಿ ಕೈಯಲ್ಲಿದ್ದ ಲಾಠಿ ತೆಗೆದು ಕಿಡಿಗೇಡಿಗೆ ಲಾಠಿ ರುಚಿ ತೋರಿಸಿದರು. ಬಳ್ಳಾರಿ ಎಪಿಎಂಸಿ ಚುನಾವಣೆ ವೇಳೆ ಲಾಠಿ ಹಿಡಿದು ಸುದ್ದಿಯಲ್ಲಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement