ಶ್ರೀಕೃಷ್ಣದೇವರಾಯ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮ ಕಲರವ
ಜ.12ರಂದು ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಸಂಜೆ 6.30ಕ್ಕೆ ಮುಂಬೈನ ಪಂಕಜ್ ಉದಾಸ್ ಅವರಿಂದ ಗಜಲ್, 7.30ಕ್ಕೆ ಬೆಂಗಳೂರಿನ ರಿಚರ್ಡ್ ಲೂಯಿಸ್ ಅವರಿಂದ ಕನ್ನಡ ಹಾಸ್ಯ, 8 ಗಂಟೆಗೆ ಮುಂಬೈನ ಜಾವೀದ್ ಅಲಿ ಅವರಿಂದ ಹಿಂದಿ ಗೀತೆಗಳ ಗಾಯನ, 9.30ಕ್ಕೆ ಬೆಂಗಳೂರಿನ ರಘು ದೀಕ್ಷಿತ್ರಿಂದ ಫ್ಯೂಜನ್, 10.30ಕ್ಕೆ ಮುಂಬೈನ ಸುನಿಧಿ ಚೌಹಾನ್ ಅವರಿಂದ ಹಿಂದಿ-ಕನ್ನಡ ಗೀತೆಗಳ ಗಾಯನ ನಡೆಯಲಿದೆ.