ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆರ್ಟಿಇ ಜಾಗೃತಿ ಜಾಥಾ

Rashmi Kasaragodu
Updated On : 14 Jan 2014, 1:07 am

ಬಳ್ಳಾರಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ನಗರದಲ್ಲಿ ವಿವಿಧ ಖಾಸಗಿ ಶಾಲಾ ಮಕ್ಕಳಿಂದ ಜನ ಜಾಗೃತಿ ಜಾಥಾ ನಡೆಯಿತು. ಶಿಕ್ಷಣಾಧಿಕಾರಿ ಆಂಥೋನಿ ಜಾಥಾಕ್ಕೆ ಚಾಲನೆ ನೀಡಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಮಾತನಾಡಿದರು. ಜಾಥಾವು ನಗರದ ಬೆಂಗಳೂರು ರಸ್ತೆಯಿಂದ ಆರಂಭವಾಗಿ ಬಾಪೂಜಿ ನಗರ, ಕಣೇಕಲ್ ಬಸ್ ನಿಲ್ದಾಣ, ಗಂಗಪ್ಪ ಜಿನ್, ಕೆ.ಸಿ. ರಸ್ತೆ, ಗಡಿಗಿ ಚನ್ನಪ್ಪ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಲಾಯಿತು. ಬಳ್ಳಾರಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎನ್. ಮರಿಸ್ವಾಮಿ ರೆಡ್ಡಿ ಮಾತನಾಡಿ, ಆರ್ಟಿಇಯ ಸದುಪಯೋಗವನ್ನು ಎಲ್ಲ ಬಡ ಮತ್ತು ಹಿಂದುಳಿದ ವರ್ಗದವರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಒಕ್ಕೂಟದ ಬಿ.ಎನ್. ಬಸರಡ್ಡಿ, ಶ್ರೀನಿವಾಸ್, ಹನುಮಂತಪ್ಪ, ಹಂಪಾರೆಡ್ಡಿ, ಇಬ್ರಾಹಿಂ, ರಂಜಾನ್, ವರ್ಮಾ, ನಾಯ್ಡು, ನಾಗಭೂಷಣ್, ರಾಜಕುಮಾರ್, ನಿಷ್ಠಿ ರುದ್ರಪ್ಪ, ಈಶ್ವರ್, ಯಲ್ಲಪ್ಪ, ಪರಮೇಶ್ವರ, ಪ್ರಭಂಜನ್, ಆಯೂಬ್, ಶಾಲೆಗಳ ವಿದ್ಯಾರ್ಥಿಗಳು, ಆಡಳಿತ ಮಂಡಳಿಯವರು, ಶಿಕ್ಷಕರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement