ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪಟ್ಟಿ ಅನುಮೋದನೆಗೆ ಒತ್ತಾಯ

Mainashree
Updated On : 15 Jan 2014, 11:40 am

ಹಗರಿಬೊಮ್ಮನಹಳ್ಳಿ: ತಾಲೂಕಿನ ಕಡ್ಲಬಾಳು ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಸಭೆ ಮೂಲಕ ಆಯ್ಕೆಯಾದ ವಸತಿ ಫಲಾನುಭವಿಗಳಿಗೆ ತಕ್ಷಣ ಜಿಪಿಎಸ್ ಮಾಡಿ ಆಯ್ಕೆಪಟ್ಟಿಗೆ ಅನುಮೋದನೆ ನೀಡಬೇಕೆಂದು ಸಿಪಿಎಂ ಕಾರ್ಯಕರ್ತರು ತಾಪಂ ಇಒಗೆ ಮನವಿಪತ್ರ ಸಲ್ಲಿಸಿದ್ದಾರೆ.
ಗ್ರಾಮಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಮೂಲಕ ತಾಪಂ ಕಚೇರಿಗೆ ಬಂದು ಪ್ರತಿಭಟಿಸಿದ ಸಿಪಿಎಂ ಕಾರ್ಯಕರ್ತರು, ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಗ್ರಾಮಸಭೆ ಮಾಡಿ, ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಪಟ್ಟಿಗೆ ಹಲವು ಗ್ರಾಮ ಪಂಚಾಯ್ತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಜಿಪಿಎಸ್ ಮಾಡಿಸಲು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಕಾಯ್ದೆ ಪ್ರಕಾರ ಆಯ್ಕೆ ಮಾಡಿರುವ ಪಟ್ಟಿಗೆ ತಕ್ಷಣ ಜಿಪಿಎಸ್ ಮಾಡಿಸಬೇಕೆಂದು ಆಗ್ರಹಿಸಿದರು.
ಬಸವವಸತಿ ಯೋಜನೆಯಡಿ 20 ಹಾಗೂ ಇಂದಿರಾ ಅವಾಸ್‌ನಲ್ಲಿ 30 ಮನೆಗಳು ಗ್ರಾಪಂಗೆ ಮಂಜೂರಾಗಿದ್ದು, ಈ ಮನೆಗಳು ಬಂದು ಆರು ತಿಂಗಳು ಕಳೆದರೂ ಇನ್ನು ಕೂಡ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿಲ್ಲ. ಕಾನೂನು ಬದ್ಧವಾಗಿಯೆ ಗ್ರಾಮಸಭೆಗಳ ಮೂಲಕ ಆಯ್ಕೆಯಾಗಿರುವ ಪಟ್ಟಿಗೆ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು.
ಸಿಪಿಎಂ ಕಡ್ಲಬಾಳು ಶಾಖೆ-1ರ ಕಾರ್ಯದರ್ಶಿ ಸಿ. ಹನುಮಂತಪ್ಪ, ಶಾಖೆ-2ರ ಕಾರ್ಯದರ್ಶಿ ಎಸ್. ಅಂಜಿನಪ್ಪ, ಪಕ್ಷದ ಮುಖಂಡರಾದ ಎಸ್. ಜಗನ್ನಾಥ, ಕೊಟಗಿ ಮಲ್ಲಿಕಾರ್ಜುನ, ಓ. ತಿಂದಪ್ಪ, ರಾಮಣ್ಣ, ಜಿ. ರಮೇಶ, ದುರುಗಪ್ಪ, ಮಂಜುನಾಥ, ಗಿರಿಜಮ್ಮ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement