ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

19ರಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಚುನಾವಣೆ

Lingaraj Badiger
Updated On : 16 Jan 2014, 10:55 am

ಬಳ್ಳಾರಿ: ಜಿಲ್ಲಾ ಕುರುಬರ ಸಂಘದ 2014-17ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಜ. 19ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಸ್ಥಳೀಯ ದೇವಿನಗರದ ಸಂಘದ ಕಟ್ಟಡದ ಕಚೇರಿದಲ್ಲಿ ನಡೆಯಲಿದೆ. ಬಳ್ಳಾರಿ ನಗರ ಕ್ಷೇತ್ರ ಹೊರತುಪಡಿಸಿ ಉಳಿದಂತೆ ಎಲ್ಲ ತಾಲೂಕುಗಳಲ್ಲಿ ಅವಿರೋಧವಾಗಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಹಾಗೂ ವಕೀಲ ಕೆ. ಎರ್ರಿಗೌಡ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಕಲ್ಲುಕಂಬ ಪಂಪಾಪತಿ, ಎಸ್. ಸಿದ್ದನಗೌಡ, ಕೆ.ಎಸ್. ಗಾದಿಲಿಂಗ, ಕೆ. ಮಂಜುನಾಥ, ಬಂಗಿಮಲ್ಲಯ್ಯ ಹಾಗೂ ಪಿ. ಲಕ್ಷ್ಮೀದೇವಿ, ಸಿರುಗುಪ್ಪ ತಾಲೂಕಿನಿಂದ ಕೆ.ಎಸ್. ಗಂಗಾಧರ, ಎಚ್. ಗೋಪಾಲ, ದಮ್ಮೂರು ಮಲ್ಲಿಕಾರ್ಜುನ, ಗೊರವರ ಶ್ರೀನಿವಾಸ, ಪ್ರತಿಭಾ, ಹೊಸಪೇಟೆ ತಾಲೂಕಿನಿಂದ ಎಲ್. ಸಿದ್ದನಗೌಡ, ಕುರಿ ಗಾದಿಲಿಂಗಪ್ಪ, ಬಿ. ಬಲ್ಲೂರೇಶ, ಕೆ. ಹೂವಣ್ಣ, ಸುಮಾ ಎಂ. ದಳವಾಯಿ, ಹೂವಿನ ಹಡಗಲಿ ತಾಲೂಕಿನಿಂದ ಗುಬ್ಬಿ ರಾಮಚಂದ್ರಪ್ಪ, ಕೆ.ಎಚ್. ದುಶ್ಯಂತಪ್ಪ, ಆರ್. ಚೈತನ್ಯ, ಈ.ಟಿ. ಹನುಮೇಶ, ಬನ್ನಿಕಲ್ಲು ಪ್ರೇಮಕ್ಕ, ಕೂಡ್ಲಿಗಿ ತಾಲೂಕಿನಿಂದ ಬಟಗೇರಿ ದೇವೇಂದ್ರಪ್ಪ, ಕೆ. ನಾಗಣ್ಣ, ಎಚ್.ಕೆ. ನಾಗರಾಜ, ಎಂ. ಭರಮಪ್ಪ, ಬಿ.ಎನ್. ಗಾಯಿತ್ರಿದೇವಿ, ಹಗರಿಬೊಮ್ಮನಹಳ್ಳಿ ತಾಲೂಕಿನಿಂದ ಉಗ್ಗಣ್ಣವರ ಮಧುಸೂದನ, ಚನ್ನಬಸಪ್ಪ ಹ್ಯಾಳ್ಯಾದ, ಕಾಡಮ್ಮನವರ ಪರಶಪ್ಪ, ಮುದುಕಪ್ಪ, ಸುವರ್ಣ ಹುಜರತ್ತಿ, ಸಂಡೂರು ತಾಲೂಕಿನಿಂದ ಕೆ. ದಮ್ಮೂರಪ್ಪ, ಕೆ. ಗುರುಪಾದಪ್ಪ, ಕೆ. ಕುಮಾರಸ್ವಾಮಿ, ಕೆ. ಮಾರೆಪ್ಪ, ಕೆ. ಲಕ್ಷ್ಮಿ ಇವರು ಜಿಲ್ಲಾ ಕುರುಬರ ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಿಂದ ಮಾತ್ರ ಚುನಾವಣೆ ನಡೆಯಲಿದ್ದು, ಪುರುಷರ ವಿಭಾಗದಿಂದ ಕೆ. ಕಾಳಿಂಗ, ಕೆ. ತಿಪ್ಪೇರುದ್ರಪ್ಪ, ಯು.ಕೆ. ತಿಮ್ಮಪ್ಪ, ಕೆ.ಆರ್. ಮಲ್ಲೇಶ್ ಕುಮಾರ್, ಬಿ. ಮುರಳೀಧರ, ಕೆ. ಮುರಳಿ ಮೋಹನ, ಕೆ. ಮೋಹನ್, ಕೆ.ಎ. ವೇಮಣ್ಣ, ಕೆ.ಆರ್. ಸುರೇಂದ್ರ, ಮಹಿಳಾ ವಿಭಾಗದಿಂದ ಕೆ. ಗಿರಿಜಮ್ಮ, ಶಶಿಕಲಾ ಕೃಷ್ಣಮೋಹನ್ ಚುನಾವಣಾ ಕಣದಲ್ಲಿದ್ದಾರೆ. ಪುರುಷರ ವಿಭಾಗಕ್ಕೆ 4 ನಿರ್ದೇಶಕ ಸ್ಥಾನಗಳು ಹಾಗೂ ಮಹಿಳಾ ವಿಭಾಗಕ್ಕೆ ಓರ್ವ ನಿರ್ದೇಶಕರ ಸ್ಥಾನ ಮಾತ್ರ ಮೀಸಲಾಗಿದ್ದು, ಸಂಘದ ಬಳ್ಳಾರಿ ನಗರ ಕ್ಷೇತ್ರದ ಮತದಾರರು ಮಾತ್ರ ಮತಚಲಾಯಿಸುವ ಹಕ್ಕು ಹೊಂದಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement