ಜಿ.ಬಿ. ಹಂಸಾನಂದಾಚಾರ್ಯರಿಗೆ ಸನ್ಮಾನ
ಹೂವಿನಹಡಗಲಿ: ಇಲ್ಲಿನ ಕರಿಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಜಕಣಾಚಾರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಲ್ಪಿ ಜಿ.ಬಿ. ಹಂಸಾನಂದಾಚಾರ್ಯರನ್ನು ಸನ್ಮಾನಿಸಲಾಯಿತು. ನಂತರ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಬಿ. ಹಂಸಾನಂದಾಚಾರ್ಯ, ಕಲಾವಿದನ ಆತ್ಮಶಕ್ತಿಯಿಂದ ಮೂಡಿಬರುವ ಶಿಲ್ಪಿಗಳು ಮೌನವಾಗಿದ್ದರೂ ಕೂಡ ಸಂದೇಶ ಸಾರುತ್ತಿರುತ್ತವೆ. ಶಿಲ್ಪಿಗಳ ಕೈಚಳಕದಿಂದ ವಿಶ್ವವೇ ಬಂದು ನೋಡುವಂತಹ ಪುರಾತನ ದೇವಾಲಯಗಳು ನಾಡಿನಲ್ಲಿ ನಿರ್ಮಾಣವಾಗಿವೆ. ಶಿಲ್ಪಿಗಳನ್ನು ಸರ್ಕಾರ ಪ್ರೋತ್ಸಾಹಿಸಿದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕರುನಾಡಿನಲ್ಲಿ ಅದ್ಭುತ ಸಾಧನೆ ಮಾಡುವ ಸಾಧಕರ ಈಗಲೂ ಇದ್ದಾರೆ ಎಂದರು. ಬೀರಬ್ಬಿ ಬಸವರಾಜ, ಶಿಕ್ಷಕ ಹೊಂಬಾಳಿ ಕೊಟ್ರೇಶ, ಜಿ. ಮೌನೇಶ, ಗುರುಬಸವರಾಜ ಮಾತನಾಡಿದರು. ಕೊಟ್ರೇಶ, ಮಾಲತೇಶ ಇದ್ದರು. ಮಂಜುಳಾ ಪ್ರಾರ್ಥಿಸಿದರು. ಎ. ಸಿದ್ಧಲಿಂಗಪ್ಪ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿದರು.