ಹಂಪಿ ವಿವಿಯಲ್ಲಿ ಇಂದಿನಿಂದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ
ಹೊಸಪೇಟೆ: ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಹಂಪಿ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ದೇವನೂರು ಮಹಾದೇವ ಅವರ ಸಾಹಿತ್ಯ ಸಾಂಸ್ಕೃತಿಕ ಮುಖಾಮುಖಿ ಕಾರ್ಯಕ್ರಮ ಜ. 17 ಮತ್ತು 18ರಂದು ಎರಡು ದಿನಗಳ ಕಾಲ ನಡೆಯಲಿದೆ. ಜ. 17ರಂದು ಬೆಳಗ್ಗೆ 10.30ಕ್ಕೆ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ್ ರೈ ಕಾರ್ಯಕ್ರಮ ಉದ್ಘಾಟಿಸುವರು. ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಬಿ.ಎಂ. ಪುಟ್ಟಯ್ಯ, ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಸಭೆಯಲ್ಲಿ ಭಾಗವಹಿಸಿವರು. ಮಧ್ಯಾಹ್ನ 12ಕ್ಕೆ ಮೊದಲನೇ ಗೋಷ್ಠಿ ನಡೆಯಲಿದ್ದು, ದೇವನೂರು ಸಾಹಿತ್ಯ ಈ ವರೆಗಿನ ಅಧ್ಯಯನಗಳ ತಾತ್ವಿಕ ಸ್ವರೂಪ ಕುರಿತು ವಿ.ಬಿ. ತಾರಕೇಶ್ವರ ಮಾತನಾಡುವರು. ಮಧ್ಯಾಹ್ನ 2.30ಕ್ಕೆ ಎರಡನೇ ಗೋಷ್ಠಿಯಲ್ಲಿ ದೇವನೂರು ಸಾಹಿತ್ಯ ಒಂದು ಪ್ರವೇಶ ಕುರಿತು ರಾಜೇಂದ್ರ ಚೆನ್ನಿ, ದೇವನೂರು ಸಾಹಿತ್ಯ, ಸಾಹಿತ್ಯ ತತ್ವ ಕುರಿತು ಡಾ. ರಹಮತ್ ತರೀಕೆರೆ ಉಪನ್ಯಾಸ ನೀಡುವರು. ಜ. 18ರಂದು ಬೆಳಗ್ಗೆ 10ಕ್ಕೆ ನಾಲ್ಕನೇ ಗೋಷ್ಠಿ ನಡೆಯಲಿದ್ದು, ದೇವನೂರು ಸಾಹಿತ್ಯ, ಸಾಮಾಜಿಕ ಸ್ತರ ವಿನ್ಯಾಸಗಳು ಕುರಿತು ವಿ.ಎಸ್. ಶ್ರೀಧರ್, ದೇವನೂರು ಸಾಹಿತ್ಯ, ಮಹಿಳಾ ಲೋಕದ ವಿನ್ಯಾಸಗಳು ಕುರಿತು ಶಿವಗಂಗ ರುಮ್ಮ, ದೇವನೂರು ಸಾಹಿತ್ಯ, ರಾಜಕೀಯ ಲೋಕದ ವಿನ್ಯಾಸಗಳು ಕುರಿತು ವಿ.ಎನ್. ಲಕ್ಷ್ಮೀ ನಾರಾಯಣ ಉಪನ್ಯಾಸ ನೀಡುವರು. ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭದಲ್ಲಿ ತುಮಕೂರಿನ ಪ್ರಸಿದ್ಧ ಕವಿ ಕೆ.ಬಿ. ಸಿದ್ದಯ್ಯ ಭಾಷಣ ಮಾಡುವರು. ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಅಧ್ಯಕ್ಷತೆ ವಹಿಸುವರು. ಸಂವಾದದಲ್ಲಿ ಟಿ.ಆರ್. ಚಂದ್ರಶೇಖರ್, ಸಿರಾಜ್ ಅಹಮದ್, ರಾಜಪ್ಪ ದಳವಾಯಿ, ಸೋ.ಮು. ಭಾಸ್ಕರಚಾರ್, ವೆಂಕಟೇಶ್ ಇಂದ್ವಾಡಿ, ಮಲ್ಲಿಕಾರ್ಜುನ ವಣೇನೂರು, ಬಿ.ಜಿ. ಕನಕೇಶಮೂರ್ತಿ, ವೆಂಕಟಗಿರಿ ದಳವಾಯಿ, ವೈ.ಬಿ. ಹಿಮ್ಮಡಿ, ಅಪ್ಪಗೆರೆ ಸೋಮಶೇಖರ್, ವಾಸುದೇವ ಬೆಳ್ಳಿ, ಎಚ್.ಟಿ. ವೆಂಕಟೇಶ್ ಮೂರ್ತಿ, ಟಿ. ಮಂಜಪ್ಪ, ಟಿ. ತಿಪ್ಪೇಸ್ವಾಮಿ, ಎಚ್.ಎಸ್. ಸತ್ಯನಾರಾಯಣ, ಬಾಜಿ ದೇವೇಂದ್ರಪ್ಪ, ಬಿ.ಜಿ. ಕಲಾವತಿ, ಶಿವಕುಮಾರ್ ಕಂಪ್ಲಿ, ಶುಭ ಮರವಂತೆ, ಟಿ. ಯಲ್ಲಪ್ಪ, ರವಿಕುಮಾರ್ ಸಂವಾದದಲ್ಲಿ ಭಾಗವಹಿಸುವರು.
--