ಅಪರಿಚಿತ ಮಹಿಳೆ ಶವ ಪತ್ತೆ: ದೂರು
ಬಳ್ಳಾರಿ: ಅಪರಿಚಿತ ಮಹಿಳೆ ಶವ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ಸರಹದ್ದಿನ ಬಂಡಿಹಟ್ಟಿ ಬಳಿಯ ಎಚ್ಎಲ್ ಕಾಲುವೆಯಲ್ಲಿ ಪತ್ತೆಯಾಗಿದೆ. ಅಂದಾಜು 35ರಿಂದ 40 ವರ್ಷ ವಯಸ್ಸುಳ್ಳ ಮೃತ ಮಹಿಳೆಯ ಶವವು ಜ. 16ರಂದು ಬೆಳಗ್ಗೆ 9 ಗಂಟೆಗೆ ಕಂಡುಬಂದಿದ್ದು, ನೀರಾವರಿ ಇಲಾಖೆಯ ಲಷ್ಕರ್ ಬಿ. ನಾರಾಯಣ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ವಿವಿಧ ಬಣ್ಣಗಳ ಹೂಗಳ ವಿನ್ಯಾಸವುಳ್ಳ ಪಾಲಿಸ್ಟರ್ ಸೀರೆ, ನೀಲಿ ಬಣ್ಣದ ಕುಪ್ಪುಸ ಧರಿಸಿದ್ದಾಳೆ. ತಲೆ ಮೇಲಿನ ಕೂದಲು ಉದುರಿ ಹೋಗಿ ತಲೆ ಬುರುಡೆ ಕಾಣುತ್ತಿದೆ. ಮೃತ ಮಹಿಳೆ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಠಾಣೆ ಪಿಎಸ್ಐ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.