ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

6 ತಿಂಗಳಿಗೊಮ್ಮೆ ರಕ್ತದಾನ ಮಾಡಿ: ರಾಜಶೇಖರ

Rashmi Kasaragodu
Updated On : 19 Jan 2014, 12:07 pm

ಕುರುಗೋಡು: ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ವೈದ್ಯಾಧಿಕಾರಿ ಟಿ. ರಾಜಶೇಖರ ರೆಡ್ಡಿ ತಿಳಿಸಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸುವ ಅಗತ್ಯವಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಕೆ. ಬಸಪ್ಪ, ಕೆ.ಎಂ. ಉಮಾಪತಿಗೌಡ, ತಾಪಂ ಸದಸ್ಯೆ ಗಾಳೆಮ್ಮ ಲಂಕೇಶ, ಚನ್ನಪಟ್ಟಣ ಮಲ್ಲಿಕಾರ್ಜುನ, ಪಿ. ಸಿದ್ದಿಸಾಬ್, ಶಂಕರಪ್ಪ, ವಿ. ಗಂಗರಾಜ್, ಚಾಗನೂರು ಬಸವರಾಜ್, ಗಾಳೆಪ್ಪ, ಬಸವರಾಜ, ಗಾಳಿ ಓಬಳೇಶ, ಕಲ್ಲುಕಂಭ ರಾಮಚಂದ್ರಪ್ಪ, ಸಿಂದಗೇರಿ ಗಾದಿಲಿಂಗ, ಬೈಲೂರು ನಾಗರಾಜ ಸೇರಿದಂತೆ ಇತರರು ರೋಗಿಗಳಿಗೆ ಹಾಲು, ಹಣ್ಣು, ಬ್ರೇಡ್ ವಿತರಿಸಿದರು. ರಾಜ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ 15 ಜನರು ರಕ್ತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement