ಆರ್ಟಿಇ ಕಾಯ್ದೆ ಜಾರಿಗೆ ಜಾಗ್ರತೆ ವಹಿಸಿ: ಮಲ್ಲಣ್ಣ
ಹೂವಿನಹಡಗಲಿ: ಆರ್ಟಿಇ ಪರಿಣಾಮಕಾರಿ ಜಾರಿಗೆ ತರಲು ಖಾಸಗಿ ಶಿಕ್ಷಣ ಸಂಸ್ಥೆಗಳು ಜಾಗ್ರತೆ ವಹಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಸಿ.ಜೆ. ಮಲ್ಲಪ್ಪ ಹೇಳಿದರು. ಪಟ್ಟಣದ ಕಾರ್ಮೆಲ್ ಸೇವಾ ಸದನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಆರ್ಟಿಇ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ದಯಾನಂದ ಎಂ., 2014-15ನೇ ಶೈಕ್ಷಣಿಕ ಸಾಲಿನಲ್ಲಿ ಆರ್ಟಿಇ ಕಾಯ್ದೆಯಡಿ ಶಿಕ್ಷಣ ಪಡೆಯುವ ಮಕ್ಕಳ ಕುರಿತು ಹಾಗೂ ಕಾಯ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ ಚರ್ಚ್ ಶಾಲೆ ಪ್ರಾಚಾರ್ಯ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಸುರೇಶ್ ಅಂಗಡಿ, ಬಿಆರ್ಸಿಯ ವೀರೇಶ್, ಪಾಂಡುನಾಯ್ಕ, ಮುಖ್ಯಗುರು ಎಚ್.ಎಂ. ಕೊಟ್ರಯ್ಯ, ಕೆ. ಕೊಟ್ರಪ್ಪ ಇದ್ದರು. ತಾಲೂಕಿನ ಎಲ್ಲ ಅನುದಾನ, ಅನುದಾನ ರಹಿತ ಶಾಲೆಯ ಶಿಕ್ಷಕರು ತರಬೇತಿಯ ಪ್ರಯೋಜನ ಪಡೆದುಕೊಂಡರು. ಪಿ.ಎಂ. ಕೊಟ್ರಸ್ವಾಮಿ ಹಾಗೂ ಹೇಮಾ ಕಿರಣ್ ಕಾರ್ಯಕ್ರಮ ನಿರ್ವಹಿಸಿದರು.