ಕೊಟ್ಟೂರು: 21ರಂದು ಚೌಡಯ್ಯ ಜಯಂತಿ
ಕೊಟ್ಟೂರು: ಗಂಗಾಮತಸ್ಥರ ಕೊಟ್ಟೂರು ಹೋಬಳಿ ಮಟ್ಟದ ಅಂಬಿಗರ ಚೌಡಯ್ಯ ಜಯಂತಿಯನ್ನು ಜ. 21ರ ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬಾರಿಕರ ಓಣಿಯ ದುರುಗಮ್ಮನ ಗುಡಿ ಬಳಿ ಸಮಾರಂಭ ನಡೆಯಲಿದೆ. ಮಹಲ್ ಮಠದ ಶಂಕರ ಸ್ವಾಮಿ, ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ, ಚಾನುಕೋಟಿ ಮಠಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯರು, ಯೋಗಿರಾಜೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಾಸಕ ಭೀಮಾನಾಯ್ಕ ಅಧ್ಯಕ್ಷತೆ ವಹಿಸುವರು, ಎಂ.ಎಂ.ಜೆ. ಹರ್ಷವರ್ಧನ್ ಉದ್ಘಾಟಿಸುತ್ತಾರೆ. ಜಿಲ್ಲಾ ಗಂಗಾಮಸ್ಥರ ಸಂಘದ ಅಧ್ಯಕ್ಷ ಬಿ. ಮೌಲಾಲಿ, ಕೂಡ್ಲಿಗಿ ತಾಲೂಕು ಅಧ್ಯಕ್ಷ ಗುಡೇಕೋಟೆ ಸುರೇಶ, ರೂಪಾ ಉದಯಸಿಂಗ್ ಲಾಡ್ ಪಾಲ್ಗೊಳ್ಳಲಿದ್ದಾರೆ. ಗಂಗಾಪರಮೇಶ್ವರಿ ಮೀನುಗಾರರ ಕೊಟ್ಟೂರು ಸಹಕಾರ ಸಂಘದ ಅಧ್ಯಕ್ಷ ಜೆ. ಬಸವರಾಜ್ ಅಂಬಿಗರ ಚೌಡಯ್ಯನವರ ಭಾವಚಿತ್ರ ಅನಾವರಣ ಮಾಡಲಿದ್ದಾರೆ ಎಂದು ಬಿ. ಪರಶುರಾಂ, ಬಿ. ರಾಜಪ್ಪ, ಬಿ. ಕೊಟ್ರೇಶ್ ತಿಳಿಸಿದ್ದಾರೆ.