ನಾಳೆ ಪರೀಕ್ಷಾರ್ಥ ನೀರು ಪೂರೈಕೆ: ಶಾಸಕ ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ತಾಲೂಕಿನ ಉಪನಾಯಕನಹಳ್ಳಿ ಹಾಗೂ 21 ಹಳ್ಳಿಗಳಿಗೆ ರು. 8.85 ಕೋಟಿ ವೆಚ್ಚದಲ್ಲಿ ತುಂಗಾಭದ್ರಾ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರನ್ನು ಪೂರೈಕೆ ಮಾಡುವ ಯೋಜನೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಜ. 20ರಿಂದಲೆ ಪರೀಕ್ಷಾರ್ಥವಾಗಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದರು. ಶನಿವಾರ ತಾಲೂಕಿನ ಪಿಂಜಾರ ಹೆಗ್ಡಾಳ್ ಗ್ರಾಮದಲ್ಲಿ ಕುಡಿಯುವ ನೀರು ಜಲಗಾರದ ನೂತನ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು. ಜಿಪಂ ಸದಸ್ಯ ಹೋಗಾಣಿ ಹುಲುಗಪ್ಪ, ಅಕ್ಕಿ ತೋಟೇಶ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಜೆಡಿಎಸ್ ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ಹೆಗ್ಡಾಳ ಶ್ರೀನಿವಾಸಶೆಟ್ಟಿ, ಹಂಚಿನಮನಿ ಹನುಮಂತಪ್ಪ, ಸಾಂಬ ಶಿವರಾಂ, ವಿ. ಮಲ್ಲೇಶಪ್ಪ, ವಿ. ಕೃಷ್ಣ, ಹನುಮಂತಪ್ಪ, ಗಜೇಂದ್ರ, ರವಿಗೌಡ, ತಾಪಂ ಇಒ ವೀರಯ್ಯ, ಆರ್. ಪ್ರಭು, ಅಂಜನೇಯಶೆಟ್ಟಿ ಭಾಗವಹಿಸಿದ್ದರು.