ಬುಡಕಟ್ಟು ಯುವ ಲೇಖಕರು ಬರೆಯಲಿ: ಕಿಕ್ಕೇರಿ ನಾರಾಯಣ
ಹೊಸಪೇಟೆ: ಅವಜ್ಞೆಗೆ ಒಳಗಾದವರ ಮತ್ತು ಅಂಚಿಗೆ ದೂಡಲ್ಪಟ್ಟವರ ಸಮಸ್ಯೆಗಳನ್ನು ಪರಿಗಣಿಸುತ್ತಿಲ್ಲ. ಇವುಗಳನ್ನು ಸಮಸ್ಯೆಯಾಗಿ ತೆಗೆದುಕೊಂಡು ಬುಡಕಟ್ಟು ಯುವ ಲೇಖಕರ ಬರೆಯಬೇಕು ಎಂದು ಬುಡಕಟ್ಟು ತಜ್ಞ ಡಾ. ಕಿಕ್ಕೇರಿ ನಾರಾಯಣ ಹೇಳಿದರು. ಹಂಪಿ ಕನ್ನಡ ವಿವಿಯ ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರ ಹಮ್ಮಿಕೊಂಡಿದ್ದ ಬುಡಕಟ್ಟು ಯುವ ಲೇಖಕರ ಮತ್ತು ಜನಪ್ರತಿನಿಧಿಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಚಾಲಕ ಡಾ.ಸಿ.ಟಿ. ಗುರುಪ್ರಸಾದ್ ಸ್ವಾಗತಿಸಿ, ವಂದಿಸಿದರು. ಮಡಿಕೇರಿ ನ್ಯಾಯವಾದಿ ಕೆ.ಆರ್. ವಿದ್ಯಾಧರ ಇದ್ದರು. ಡಾ. ರಾಧಮ್ಮ ನಿರೂಪಿಸಿದರು. ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಕೊಡಗಿನ ಸಮುದಾಯಗಳ ಸಂಸ್ಕೃತಿ ಮತ್ತು ಚರಿತ್ರೆ ಕುರಿತು ಪ್ರಬಂಧ ಮಂಡಿಸಿದರು.