ಬ್ಯಾಂಕಿನ ಪ್ರಗತಿಗೆ ಶ್ರಮಿಸಿ: ಸುಧೀರ್ಕುಮಾರ್
ಬಳ್ಳಾರಿ: ಬ್ಯಾಂಕಿನ ಸಿಬ್ಬಂದಿ ಉತ್ತಮ ಸೇವೆಯಿಂದ ಗ್ರಾಹಕರನ್ನು ಸೆಳೆಯುವ ಮೂಲಕ ಬ್ಯಾಂಕಿನ ಪ್ರಗತಿಗೆ ಶ್ರಮಿಸಬೇಕೆಂದು ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸುಧೀರ್ಕುಮಾರ್ ಜೈನ್ ತಿಳಿಸಿದರು. ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ಬ್ಯಾಂಕ್ ಸಿಬ್ಬಂದಿ ತಮ್ಮ ಶಾಖೆಗಳಲ್ಲಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯಲ್ಲಿನ ಠೇವಣಿ ಮೊತ್ತದ ಪ್ರಮಾಣವನ್ನು ಹೆಚ್ಚಿಸಬೇಕು. ಚಿಲ್ಲರೆ ವ್ಯಾಪಾರದ ಸಾಲಗಳನ್ನು ಹೆಚ್ಚಿಸಿ ಆದ್ಯತಾ ರಂಗಕ್ಕೆ ಸಾಲ ನೀಡಬೇಕು. ಅಲ್ಲದೆ ಮಿಡ್ ಕಾರ್ಪೊರೇಟ್ (ಕೈಗಾರಿಕಾ) ವಲಯಕ್ಕೆ ಹೆಚ್ಚು ಸಾಲ ನೀಡಬೇಕೆಂದರು. ಬೆಂಗಳೂರು ಕಾರ್ಪೊರೇಟ್ ಆಫೀಸ್ ಮಹಾ ಪ್ರಬಂಧಕ ವಸಂತರಾಜನ್, ಅಲೋಕ್ ಶರ್ಮ ಮಾತನಾಡಿದರು. ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಎಸ್.ಎಂ. ಗೋರೆಬಾಳ ನಿರೂಪಿಸಿದರು. ಸಿಂಧನೂರು ಶಾಖೆಯ ಕುಮಾರಯ್ಯ ವಂದಿಸಿದರು.