ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಲ್ಲಿಕಾರ್ಜುನ ಬಂಡೆ ಮಾದರಿ: ನರೇಂದ್ರ

Rashmi Kasaragodu
Updated On : 19 Jan 2014, 12:08 pm

ಬಳ್ಳಾರಿ: ಗುಲ್ಬರ್ಗದ ಶೂಟೌಟ್ ಪ್ರಕರಣದಲ್ಲಿ ವೀರ ಮರಣವನ್ನಪ್ಪಿದ ನಿಷ್ಠಾವಂತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ  ಕಾರ್ಯದಕ್ಷತೆ ಮತ್ತು ಧೈರ್ಯ ಯುವಕರಿಗೆ ಮಾದರಿಯಾಗಿದೆ. ಅವರ ಸಾವು ಇಲಾಖೆಗೆ ತುಂಬಲಾರದ ನಷ್ಟ ಎಂದು ಪುರಸಭೆ ಸದಸ್ಯ ನರೇಂದ್ರ ಪಾಟೀಲ್ ಹೇಳಿದರು. ಜಿಲ್ಲೆಯ ಸಂಡೂರು ಪಟ್ಟಣದ ವಿಜಯ ವೃತ್ತದಲ್ಲಿ ಮೃತ ಅಧಿಕಾರಿಗೆ ಓಂ ಯುವಕ ಮಂಡಳಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುರಸಭೆಯ ಇನ್ನೋರ್ವ ಸದಸ್ಯ ಡಿ. ರಾಘವೇಂದ್ರ ಮಾತನಾಡಿದರು. ಪುರಸಭೆ ಸದಸ್ಯರಾದ ಕೆ. ಸುರೇಶ್, ನಬಿಸಾಬ್, ಓಂ ಮಂಡಳಿ ಆಧ್ಯಕ್ಷ ರಾಜು, ಕುಮಾರಪ್ಪ, ರವಿಕುಮಾರ್, ಮಲ್ಲಿಕಾರ್ಜುನ, ಪ್ರವೀಣ್, ಮಹೇಶ್, ನವೀನ್ ಕುಮಾರ್, ಸಂತೋಷ್, ವಂಟೆ ಬಸವರಾಜ್, ಗುಡಿ ನಾಗರಾಜ್, ಶ್ರೀನಿವಾಸ್, ಬಸವರಾಜ್, ರೂಪಾ ನಾಯ್ಕ್, ರಮೇಶ್ ಚೌಹಾಣ್, ಅನಿಲ್ ನಾಯ್ಡು, ಪ್ರವೀಣ್. ಜಿ. ರಾಮ, ಮಹೇಶ್, ಟೂಬ್ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement