ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಯುವ ಕಾಂಗ್ರೆಸ್ಗೆ ಹಣ್ಣಿ ಅಶೋಕ್ ಅಧ್ಯಕ್ಷ

Rashmi Kasaragodu
Updated On : 19 Jan 2014, 12:07 pm

ಹೂವಿನಹಡಗಲಿ: ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಹಣ್ಣಿ ಅಶೋಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಬೂತ್ ಮಟ್ಟದ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮುದ್ದಿ ಗಿರಿರಾಜ, ಪ್ರಧಾನ ಕಾರ್ಯದರ್ಶಿಗಳಾಗಿ ಜಿ. ಕೃಷ್ಣ, ರಾಮಪ್ಪ, ಜಿ. ಮಹಾಂತೇಶ ಗೆಲವು ಸಾಧಿಸಿದ್ದಾರೆಂದು ತಿಳಿಸಿದರು. ಮೈಲಾರ- ತೋರಣಗಲ್ಲು ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದೆ. ಮೈಲಾರ ಜಾತ್ರೆಯೊಳಗೆ ರಸ್ತೆ ಅಭಿವೃದ್ಧಿ ಅಸಾಧ್ಯ, ಈಗಾಗಲೆ ಸಂಬಂಧಪಟ್ಟ ಗುತ್ತಿಗೆದಾರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಐಗೋಳ ಚಿದಾನಂದ, ವಾರದಗೌಸ್ ಮೋಹಿದ್ದೀನ್, ಅಟವಾಳಿಗಿ ಕೊಟ್ರೇಶ, ಯುವ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement