ರೈತ ವಾಸಪ್ಪ ಜಮೀನಿನಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ
ಹೂವಿನಹಡಗಲಿ: ರೈತ ವಾಸಪ್ಪ ಇವರ ಜಮೀನಿನಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು. ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ಯೋಗಾನಂದ, ಬೇಸಾಯ ತಜ್ಞ ಡಾ.ಸಿ.ಎಂ. ಕಾಲಿಬಾವಿ ಮಾತನಾಡಿದರು. ಪ್ರಗತಿಪರ ರೈತ ಅಣ್ಣಿ ವೀರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಶಂಕರ ಜಾಡರ, ಪ್ರಕಾಶ, ಆಚಾರ, ಚೇತನ್ ರೈತ ವಾಸಪ್ಪ ಮಾತನಾಡಿದರು. ಮಾಗಳದ ಕುರಿ ಮಲ್ಲಣ್ಣ ಕೊಳವೆ ಬಾವಿ ನೀರಿನ ಜೋಡಣೆ ಬಗ್ಗೆ ತಾಂತ್ರಿಕ ಮಾಹಿತಿ ಸಹಿತ ಪ್ರಾತ್ಯಕ್ಷಿಕೆ ನೀಡಿದರು. ಕೃಷಿ ಸಂಶೋಧನಾ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹಗರಿಯಲ್ಲಿ ಜ. 21, 2014ರಂದು ಒಂದು ದಿನದ ಕೃಷಿ ಮೇಳ ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಡಾ. ರವಿಶಂಕರ್- 9480696317 ಅಥವಾ ಡಾ.ಸಿ.ಎಂ. ಕಾಲಿಬಾವಿ- 9480696336ನ್ನು ಸಂಪರ್ಕಿಸಬಹುದು.