ವೃತ್ತಿ ಶಿಕ್ಷಣದಿಂದ ಸ್ವಾವಲಂಬಿ ಬದುಕು: ಆಂಥೋನಿ
ಬಳ್ಳಾರಿ: ವಿದ್ಯಾರ್ಥಿಗಳು ಜೀವನದಲ್ಲಿ ವೃತ್ತಿ ಶಿಕ್ಷಣ ಪಡೆಯುವುದರಿಂದ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಿ ಬದುಕಬಹುದು ಎಂದು ಶಿಕ್ಷಣಾಧಿಕಾರಿ ಆಂಥೋನಿ ತಿಳಿಸಿದರು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ವಿಷಯ ತಜ್ಞ ಷಬ್ಬಿರ್ಅಹ್ಮದ್ ಪ್ರಾಸ್ತಾವಿಕ ಮಾತನಾಡಿದರು. ಬೆಂಗಳೂರಿನ ತೋಟಗಾರಿಕೆ ಶಿಕ್ಷಕ ಸಿ. ಲಕ್ಷ್ಮಣ ಆಗಮಿಸಿದ್ದರು. ವಿಷಯ ಪರಿವೀಕ್ಷಕ ಸಿ. ಪುಟ್ಟಯ್ಯ, ಶಿವಶಂಕರಪ್ಪ, ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನ ಉಪ ಪ್ರಾಚಾರ್ಯ ನೀಲಕಂಠಯ್ಯಸ್ವಾಮಿ, ವೇದಾವತಿ ಇದ್ದರು. ಕೂಡ್ಲಿಗಿ ವೃತ್ತಿ ಶಿಕ್ಷಕ ಮಹೇಶ್ ಸ್ವಾಗತಿಸಿದರು. ದರೋಜಿ ತೋಟಗಾರಿಕೆ ಶಿಕ್ಷಕ ಮಹಾದೇವಪ್ಪ ನಿರೂಪಿಸಿದರು. ಮರಿಯಮ್ಮನಹಳ್ಳಿ ಶಿಕ್ಷಕಿ ಭಾರತಿ ವಂದಿಸಿದರು.