ಸ್ತ್ರೀಯರು ಆರ್ಥಿಕಾಭಿವೃದ್ಧಿ ಹೊಂದಿ: ರೂಪೇಶ್
ಹೊಸಪೇಟೆ: ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುವ ಮೂಲಕ ಆರ್ಥಿಕಾಭಿವೃದ್ದಿ ಹೊಂದಲು ಮುಂದಾಗಬೇಕು ಎಂದು ನಗರಸಭಾ ಸದಸ್ಯ ರೂಪೇಶ್ ಕುಮಾರ್ ಹೇಳಿದರು. ನಗರದ ರಾಣಿಪೇಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನನಿ ಎಂಬ ಸಂಘ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯಂತಹ ಕಾರ್ಯ ಪತ್ತೆ ಹಚ್ಚಿ, ನೊಂದ ಮಹಿಳೆಯರ ಪರವಾಗಿ ಧ್ವನಿ ಎತ್ತುವ ಮೂಲಕ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಸಂಘಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಅಲಿಸಾಬ್, ಸೇವಾ ಪ್ರತಿನಿಧಿ ಎಂ.ಎಸ್. ಸುವರ್ಣರತ್ನ, ಹೇಮಲತಾ, ಸಂಗೀತ ಸೇರಿದಂತೆ ಹಲವರು ಇದ್ದರು.