ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದಿನಿಂದ ಸೇನಾ ನೇಮಕಾತಿ ರ್ಯಾಲಿ

Mainashree
Updated On : 20 Jan 2014, 11:56 am

ಬಳ್ಳಾರಿ: ಭಾರತೀಯ ಭೂಸೇನೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೆಎಲ್‌ಇ ಕ್ಯಾಂಪಸ್‌ನ ಬಿಕೆ ಕಾಲೇಜಿನಲ್ಲಿ ಜ. 20ರಿಂದ 30ರ ವರೆಗೆ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.
ಪುರುಷ ಅಭ್ಯರ್ಥಿಗಳು ಮಾತ್ರ ಈ ರ್ಯಾಲಿಯಲ್ಲಿ ಭಾಗವಹಿಸಬಹುದು, ರ್ಯಾಲಿಗೆ ಬರುವಾಗ ಎಸ್ಸೆಸ್ಸೆಲ್ಸಿ ಸೇರಿದಂತೆ ಉನ್ನತ ವ್ಯಾಸಂಗದ ಎಲ್ಲ ಮೂಲ ಪ್ರಮಾಣಪತ್ರಗಳು, ಪಾಸ್‌ಪೋರ್ಟ್ ಅಳತೆಯ 15 ಭಾವಚಿತ್ರಗಳು, ನಾಡಕಚೇರಿ, ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಂದ ಪಡೆದ ರಹವಾಸಿ, ಜಾತಿ, 6 ತಿಂಗಳೊಳಗೆ ಪಡೆದ ನಡತೆ ಪ್ರಮಾಣ ಪತ್ರ, ಅಭ್ಯರ್ಥಿಯ ವಯೋವಾನ 18 ವರ್ಷದೊಳಗಿದ್ದಲ್ಲಿ ಪಾಲಕರಿಂದ ಪಡೆದ ಶಪಥ ಪತ್ರ, ಕ್ರೀಡೆ ಅಥವಾ ಎನ್‌ಸಿಸಿ ಪ್ರಮಾಣ ಪತ್ರಗಳು ಮತ್ತಿತರ ದಾಖಲೆಗಳನ್ನು ಹೊಂದಿರಬೇಕು. ಎಲ್ಲ ದಾಖಲೆಗಳ ಮೂಲ ಪ್ರಮಾಣಪತ್ರ ಹಾಗೂ ಎರಡು ಸೆಟ್ ಝೆರಾಕ್ಸ್ ಪ್ರತಿಗಳನ್ನು ತರಬೇಕು. ರ್ಯಾಲಿಗೆ ತರುವ ಎಲ್ಲ ಪ್ರಮಾಣಪತ್ರಗಳು ಇಂಗ್ಲಿಷ್, ಹಿಂದಿ ಭಾಷೆಯಲ್ಲಿರಬೇಕು.
ಸೋಲ್ಜರ್ ಲಿಪಿಕ: ಉಗ್ರಾಣ ಪಾಲಕ ತಾಂತ್ರಿಕ ಹುದ್ದೆಗೆ ಜ. 20ಮತ್ತು 30ರಂದು ರ್ಯಾಲಿ ನಡೆಯಲಿದ್ದು 20ರಂದು ಬೆಳಗಾವಿ, ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ, 30ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಚಾಮರಾಜನಗರ, ಗದಗ, ಹಾವೇರಿ, ಮಂಡ್ಯ, ಚಿಕ್ಕಬಳ್ಳಾಪುರ, ರಾಮನಗರ, ಬಾಗಲಕೋಟೆ, ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಂಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಕೊಡಗು, ಉಡುಪಿ, ಬಿಜಾಪುರ, ಧಾರವಾಡ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು. ಅದೇ ರೀತಿ ಜ. 20ರಂದು ಡಿಎಸ್‌ಸಿ ಹುದ್ದೆಗೆ ಎಲ್ಲ ಜಿಲ್ಲೆಗಳ ಮಾಜಿ ಸೈನಿಕರು ಪಾಲ್ಗೊಳ್ಳಬಹುದು.
ಜ. 21ರಿಂದ 28ರ ವರೆಗೆ ಸೈನಿಕ ಸಾಮಾನ್ಯ ಕರ್ತವ್ಯ ಹುದ್ದೆಗೆ ಭರ್ತಿ ನಡೆಯಲಿದೆ. 21ರಂದು ಬೆಳಗಾವಿ, ಅಥಣಿ, ರಾಯಭಾಗ, 22ರಂದು ಗೋಕಾಕ್, ಹುಕ್ಕೇರಿ, ಜ. 23ರಂದು ಬೈಲಹೊಂಗಲ, ಕಿತ್ತೂರು, ಸವದತ್ತಿ, ಜ. 24ರಂದು ಬೆಳಗಾವಿ ಜಿಲ್ಲೆ ಹಾಗೂ ತಾಲೂಕು, 25ರಂದು ಖಾನಾಪುರ ಹಾಗೂ ರಾಮದುರ್ಗ, 27ರಂದು ಚಿಕ್ಕೋಡಿ ತಾಲೂಕು, ಜ. 28ರಂದು ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆ ಅಭ್ಯರ್ಥಿಗಳು ಭಾಗವಹಿಸಬಹುದು. ಸೈನಿಕ ಟ್ರೇಡ್ಸ್‌ಮನ್ ಹುದ್ದೆಗೆ ಜ. 28 ಮತ್ತು 29ರಂದು ರ್ಯಾಲಿ ನಡೆಯಲಿದ್ದು, 28ರಂದು ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ, 29ರಂದು ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ಅಭ್ಯರ್ಥಿಗಳಿಗೆ ನಡೆಯಲಿದೆ.
ಸೈನಿಕ ಶುಶ್ರೂಷಾ ಸಹಾಯಕ ಹುದ್ದೆಗೆ ಬೆಳಗಾವಿ, ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆ,  ಆರ್ಟಿ ಜೆಸಿಒ ಹುದ್ದೆಗೆ ಕರ್ನಾಟಕ, ಕೇರಳದ ಎಲ್ಲ ಜಿಲ್ಲೆ, ಯು.ಟಿ. ಲಕ್ಷದ್ವೀಪ,  ಮಾಹೆ ಪ್ರದೇಶದವರು ಭಾಗವಹಿಸಬಹುದು. ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ಟ್ರೇಡ್ಸ್‌ಮನ್,  ಸೈನಿಕ ಶುಶ್ರೂಷಾ ಸಹಾಯಕ ಹುದ್ದೆಗಳಿಗೆ ವಯೋವುತಿ 17ರಿಂದ 23 ವರ್ಷ. ಸೈನಿಕ ಸಾಮಾನ್ಯ ಕರ್ತವ್ಯ ಹುದ್ದೆಗೆ 17ರಿಂದ 21 ವರ್ಷ. ಆರ್ಟಿ ಜೆಸಿಒ ಹುದ್ದೆಗೆ ಸಿವಿಲ್ ಅಭ್ಯರ್ಥಿಗಳಿಗೆ 27ರಿಂದ 34 ಹಾಗೂ ರಿಮಸ್ಟರಿಂಗ್ ಅಭ್ಯರ್ಥಿಗಳಿಗೆ 25ರಿಂದ 34 ವರ್ಷ. ಡಿಎಸ್‌ಸಿ ಹುದ್ದೆಗೆ 48 ವರ್ಷದವರೆಗೆ ಮಾತ್ರ ವಯೋವುತಿ ನಿಗದಿಪಡಿಸಲಾಗಿದೆ.
ಸೈನಿಕ ಲಿಪಿಕ ಹಾಗೂ ಉಗ್ರಾಣ ಪಾಲಕ ತಾಂತ್ರಿಕ ಹುದ್ದೆಗೆ ಪಿಯುಸಿ, ತತ್ಸಮಾನ ವಿದ್ಯಾರ್ಹತೆ ಹೊಂದಿದ್ದು, ಶೇ. 50ರಷ್ಟು ಅಂಕಗಳಿಸಿರಬೇಕು. ಸೈನಿಕ ಸಾಮಾನ್ಯ ಕರ್ತವ್ಯ ಹುದ್ದೆಗೆ ಶೇ. 45 ಅಂಕಗಳೊಂದಿಗೆ ಎಸ್ಸೆಸ್ಸೆಲ್ಸಿ, ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಸೈನಿಕ ಸಾಮಾನ್ಯ ಕರ್ತವ್ಯ ಹುದ್ದೆಗೆ ಶೇ. 45 ಅಂಕಗಳೊಂದಿಗೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು.  ಸೈನಿಕ ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ ಹುದ್ದೆಗೆ ಪಿಯುಸಿಯಲ್ಲಿ ಶೇ. 50 ಅಂಕಗಳಿಸಿರಬೇಕು. ಸೋಲ್ಜರ್ ಟ್ರೇಡ್ಸ್‌ಮನ್ (ಸ್ಟೀವರ್ಡ್, ಅಡುಗೆಯವ, ಅರ್ಟೀಸನ್(ಮೆಟಲರ್ಜಿ)ವಾಷರ್‌ಮನ್, ಡ್ರೆಸ್ಸರ್ ಹಾಗೂ ಕೆನ್ನೆಲ್ ಮೆನ್) ಹುದ್ದೆಗೆ ಎಸ್ಸೆಸ್ಸೆಲ್ಸಿ ಪಾಸಾಗಿದ್ದರೆ ಸಾಕು.   ಸೈನಿಕ ಟ್ರೇಡ್ಸ್‌ಮನ್(ಹೌಸ್ ಕೀಪರ್) ಹುದ್ದೆಗೆ ಕನಿಷ್ಠ 8ನೇ ತರಗತಿ ತೇರ್ಗಡೆ ಹೊಂದಿದ್ದರೆ ಸಾಕು.
ಸೋಲ್ಜರ್ ಸಾಮಾನ್ಯ ಕರ್ತವ್ಯ ಹುದ್ದೆಗೆ 166 ಸೆಂ.ಮೀ. ಎತ್ತರ, ಎದೆ ಸುತ್ತಳತೆ 77-82, ಸೈನಿಕ ಟ್ರೇಡ್ಸ್‌ಮನ್ ಹುದ್ದೆಗೆ 166 ಸೆಂ.ಮೀ. ಎತ್ತರ, ಎದೆ ಸುತ್ತಳತೆ 76-81, ಸೋಲ್ಜರ್ ಟೆಕ್ನಿಕಲ್ ಸೈನಿಕ ಶುಶ್ರೂಷಾ ಹುದ್ದೆಗೆ 165 ಸೆಂ.ಮೀ, ಎತ್ತರ, ಎದೆ ಸುತ್ತಳತೆ 77-82, ಸೈನಿಕ ಲಿಪಿಕ, ಉಗ್ರಾಣ ಸಹಾಯಕ ತಾಂತ್ರಿಕ ಹುದ್ದೆಗೆ 162 ಸೆಂ.ಮೀ, ಎತ್ತರ, ಎದೆ ಸುತ್ತಳತೆ 77-82.  ಸೈನಿಕ ಟ್ರೇಡ್ಸ್‌ಮನ್ ಹುದ್ದೆಗೆ 48 ಕೆ.ಜಿ. ಹಾಗೂ ಉಳಿದೆಲ್ಲ ಹುದ್ದೆಗಳಿಗೆ ಕನಿಷ್ಠ 50 ಕೆ.ಜಿ. ತೂಕ ಇರಬೇಕು. ರ್ಯಾಲಿ ಸಂದರ್ಭದಲ್ಲಿ 1.6 ಕಿ.ಮೀ. ಓಟ, ಕನಿಷ್ಠ 6 ರಿಂದ 10 ಪುಲ್ ಅಪ್ಸ್ ದೈಹಿಕ ಪರೀಕ್ಷೆ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗೆ ಸೇನಾ ನೇಮಕಾತಿ ಕಚೇರಿ, ಬೆಳಗಾವಿ-0831-2465550 ಅಥವಾ ಢಿಢಿಢಿ.್ಠ್ಟಛಿಛಟ್ಜಿಛಟ್ಟ್ಠಜ.್ಜ್ಟಢ.್ಝಟಿ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement