ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 20 Jan 2014, 11:56 am

ಪಡಿತರ ಚೀಟಿ ನವೀಕರಣ: ಫೆ. 15 ಕಡೆಯದಿನ

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಪ್ರದೇಶದ ಪಡಿತರ ಚೀಟಿದಾರರು ಫೆಬ್ರವರಿ 15ರೊಳಗಾಗಿ ಪಡಿತರ ಚೀಟಿಯನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಈಗಾಗಲೆ ನವೀಕರಣ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ಪ್ರಕ್ರಿಯೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ 2010ಕ್ಕೆ ಮುಂಚೆ ನೀಡಲಾಗಿದ್ದ ಪಡಿತರ ಚೀಟಿಗಳನ್ನು ನವೀಕರಣ ಮಾಡಲಾಗುವುದು. ಬಳ್ಳಾರಿ ಗ್ರಾಮೀಣ ಪ್ರದೇಶದ ಪಡಿತರ ಚೀಟಿದಾರರು ಫೆ. 15ರೊಳಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಮಚಾಯಿತಿಗಳಲ್ಲಿ ಕುಟುಂಬ ಸದಸ್ಯರ ಫೋಟೋ, ಬೆರಳಚ್ಚು ನೀಡಿ ನವೀಕರಣ ಪಡಿಸಿಕೊಳ್ಳಬಹುದು. ನವೀಕರಣ ಮಾಡಿಸದಿದ್ದಲ್ಲಿ 2014ರ ಮಾರ್ಚ್ ಮಾಹೆಯಿಂದ ಪಡಿತರ ದೊರೆಯುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪಘಾತ: ಬೈಕ್ ಸವಾರ ಸಾವು
ಬಳ್ಳಾರಿ: ಬತ್ತ ಕೊಯ್ಯುವ ಯಂತ್ರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಮೃತಪಟ್ಟ ಘಟನೆ ತಾಲೂಕಿನ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ನೆಟ್ಟಕಲ್ಲಪ್ಪ ಎಂಬಾತನೆ ಮೃತವ್ಯಕ್ತಿ. ತಾಲೂಕಿನ ಚಾನಾಳ್ ಕ್ರಾಸ್‌ನಿಂದ ಹಡ್ಲಿಗಿ ಗ್ರಾಮಕ್ಕೆ ಹೋಗುವಾಗ ನಿಂತಿದ್ದ ಬತ್ತ ಕೊಯ್ಯುವ ಯಂತ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾನೆ. ಮೋಕಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾರಿ ಡಿಕ್ಕಿ: ಓರ್ವ ಸಾವು
ಬಳ್ಳಾರಿ: ತಾಲೂಕಿನ ಪಿ.ಡಿ. ಹಳ್ಳಿ ಬಳಿ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿ ಲಾರಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಅಸ್ಸಾಂ ಮೂಲದ ತಾತ್ಯಾ ಯಾದವ್ (22) ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯೆರಾತ್ರಿ 12ರ ಸುಮಾರಿಗೆ ಅಪಘಾತ ಸಂಭವಿಸಿದೆ. ಈ ಕುರಿತು ಪಿ.ಡಿ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಗರಿಬೊಮ್ಮನಹಳ್ಳಿ: ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಮಂಡಿಸಿರುವ ಅವಿಶ್ವಾಸಕ್ಕೆ ನನ್ನ ಬೆಂಬಲ ಇಲ್ಲ, ಕೆಲ ಸದಸ್ಯರು ಆಸೆ, ಆಮಿಷ ತೋರಿಸಿ ಹಾಗೂ ತಪ್ಪು ಮಾಹಿತಿ ನೀಡಿ ನನ್ನಿಂದ ಅವಿಶ್ವಾಸ ನಿರ್ಣಯದ ಪತ್ರಕ್ಕೆ ಸಹಿ ಪಡೆದಿದ್ದಾರೆ. ಆದರೆ ಅವಿಶ್ವಾಸದ ಪರ ಇಲ್ಲ ಎಂದು ಎಪಿಎಂಸಿ ಸದಸ್ಯ ವಿ. ಕೃಷ್ಣ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ಅಂಕಸಮುದ್ರ ಗ್ರಾಮದಲ್ಲಿ ಮಾತನಾಡಿ, ಎಪಿಎಂಸಿ ಸದಸ್ಯರು ನನ್ನ ಬಳಿ ಬಂದು ನಿಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕಣಗಳು, ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಬೇಕಾಗಿದೆ. ಅದ್ದರಿಂದ ಈ ಪತ್ರಕ್ಕೆ ಸಹಿ ಮಾಡಿ ಎಂದರು. ನಾನು ಅಭಿವೃದ್ಧಿ ಕೆಲಸ ಎಂದು ಸಹಿ ಮಾಡಿದೆ. ಪತ್ರದಲ್ಲಿ ಏನು ಬರೆದಿದೆ ಎಂಬುವುದು ನನಗೆ ತಿಳಿದಿರಲಿಲ್ಲ. ಆದರೀಗ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಅವಿಶ್ವಾಸ ತರಲು ಮಂಡಿಸಲಾಗುವ ಪತ್ರ ಎಂದು ತಿಳಿದಿದೆ. ಹೀಗಾಗಿ ಸಹಿಯನ್ನು ಮಾನ್ಯ ಮಾಡಬಾರದೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement