6 ವರ್ಷದ ಬಾಲಕನಿಗೆ ಕಚ್ಚಿದ ಬೀದಿ ನಾಯಿಗಳು
ಬಳ್ಳಾರಿ: ಬಹಿದೆರ್ಸೆಗೆ ಹೋಗಿದ್ದ 6 ವರ್ಷದ ಬಾಲಕನನ್ನು ಬೀದಿ ನಾಯಿಗಳು ಭೀಕರವಾಗಿ ಕಚ್ಚಿದ ಘಟನೆ ಬಳ್ಳಾರಿಯ ಭತ್ರಿರಸ್ತೆಯ ಶ್ರೀನಗರ ಕಾಲೋನಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಗಾಯಗೊಂಡಿರುವ ಶ್ರೀನಗರ ಕಾಲೋನಿಯ 6 ವರ್ಷದ ಬಾಲಕ ಗೋಪಿ ಅಲಿಯಾಸ್ ಗೋಪಿನಾಥ್ ವಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಸಾರ್ವಜನಿಕರು ನೋಡಿದ ಫಲವಾಗಿ ಗೋಪಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಈತನ ತಾಯಿ ಲಕ್ಷ್ಮಿ ಕೆಲಸಕ್ಕೆ ಹೋಗಿದ್ದಾಗ ಆಕೆಯ ಇಬ್ಬರು ಮಕ್ಕಳು ಮನೆಯಲ್ಲಿಯೇ ಇದ್ದರು. ಸಂಜೆ ಹೊತ್ತು ಗೋಪಿ ಮನೆ ಪಕ್ಕದಲ್ಲಿ ಬಹಿರ್ದೆಸೆಗೆ ಹೋದಾಗ ಸುಮಾರು ಏಳೆಂಟು ನಾಯಿಗಳು ಆತನನ್ನು ಹಿಡಿದು ಎಳೆದಾಡಿವೆ. ಇದರಿಂದಾಗಿ ಕಿವಿ, ಪಕ್ಕೆ, ತಲೆಗೆ ತೀವ್ರ ಗಾಯಗಳಾಗಿವೆ. ಮಗುವಿನ ಕಿರುಚುವ ಧ್ವನಿ ಕೇಳಿದ ಸ್ಥಳೀಯರು ನಾಯಿಗಳಿಂದ ಮಗುವನ್ನು ರಕ್ಷಿಸಿದ್ದಾರೆ.