ಇಂದು ಲೇಖನ ಯಜ್ಞ
ಬಳ್ಳಾರಿ: ನಗರದ ರಾಘವ ಕಲಾಮಂದಿರದಲ್ಲಿ ಅಷ್ಟೋತ್ತರ ಶತಕೋಟಿ ಶ್ರೀರಾಮ ತಾರಕ ಮಹಾಮಂತ್ರದ ಲೇಖನ ಯಜ್ಞ ಮತ್ತು ಜಪಯಜ್ಞ ದೀಕ್ಷಾ ಕಾರ್ಯಕ್ರಮವು ಜ.22ರಂದು ಸಂಜೆ ಜರುಗಲಿದೆ. ಶ್ರೀಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಸ್ವಾಮಿ ಭಕ್ತ ವೃಂದ ಕಾರ್ಯಕ್ರಮ ಆಯೋಜಿಸಿದ್ದು, ಮಾರುತಿ ಗುರೂಜಿ ಅವರಿಂದ ಶ್ರೀರಾಮ ತಾರಕ ಜಪಯಜ್ಞದ ಮಹತ್ವ ಮತ್ತು ಪ್ರಯೋಜನಗಳ ಕುರಿತು ಆಶೀರ್ವವಚನ ಮತ್ತು ದೀಕ್ಷಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಶಿಕ್ಷಕರ ಸಭೆ
ಹೂವಿನಹಡಗಲಿ: ಹೈಕ ಭಾಗದ 6 ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ನೀಡಿರುವ ವಿಶೇಷ 371(ಜೆ) ವಿಧಿ ಅಡಿ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿದುವ ಬಗ್ಗೆ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಕಾಲೇಜುಗಳ ಶಿಕ್ಷಕರ ಸಭೆಯನ್ನು ಜ. 22ರಂದು ಪಟ್ಟಣದ ಜೆಎಸ್ಎಸ್ ಬಿಇಡಿ ಕಾಲೇಜಿನಲ್ಲಿ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಆದ್ದರಿಂದ ತಾಲೂಕಿನ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯ ಗುರುಗಳು, ಪ್ರಾಚಾರ್ಯರು, ಓರ್ವ ಶಿಕ್ಷಕ, ಉಪನ್ಯಾಸಕರೊಂದಿಗೆ ಸಭೆಗೆ ಆಗಮಿಸಬೇಕೆಂದು ಸಂಚಾಲಕ ಎಸ್.ಎಸ್. ಪಾಟೀಲ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ-9482717166, 9448877140, 99457072237 ಸಂಪರ್ಕಿಸಬೇಕೆಂದು ಕೋರಿದ್ದಾರೆ.
ಉತ್ತಮ ಫಲಿತಾಂಶ
ಹೂವಿನಹಡಗಲಿ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಚಿತ್ರಕಲಾ ಗ್ರೇಡ್ ಪರೀಕ್ಷೆಯ 2013-14ನೇ ಸಾಲಿನಲ್ಲಿ ಪಟ್ಟಣದ ತುಂಗಭದ್ರಾ ಪ್ರೌಢಶಾಲೆಗೆ ಶೇ. 100ರಷ್ಟು ಫಲಿತಾಂಶ ಲಭಿಸಿದೆ. 10ನೇ ತರಗತಿ ವಿದ್ಯಾರ್ಥಿನಿ ಪಿ. ದೀಪಾ ಡಿಸ್ಟಿಂಕ್ಷನ್ಲ್ಲಿ ಉತ್ತೀರ್ಣಳಾಗಿದ್ದಾಳೆ. ಪ್ರೌಢ ಶಾಲಾವತಿಯಿಂದ ಪರೀಕ್ಷೆಗೆ 46 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ 1 ಡಿಸ್ಟಿಂಕ್ಷನ್, 29 ಪ್ರಥಮ, 16 ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಲೋಯರ್ ಗ್ರೇಡ್ ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳು- 76 ಡಿಸ್ಟಿಂಕ್ಷನ್- 4, ಪ್ರಥಮ- 35, ದ್ವಿತೀಯ- 37, ಶೇ. 100 ಹೈಯರ್ ಗ್ರೇಡ್ ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳು- 40, ಡಿಸ್ಟಿಂಕ್ಷನ್- 2, ಪ್ರಥಮ-26, ದ್ವಿತೀಯ- 9, ಶೇ. 93 ಕೇಂದ್ರದ ಒಟ್ಟು ಫಲಿತಾಂಶ ಶೇ. 98. ಆಗಿಕೆ. ಈ ಸಾಧನೆಗೆ ಸಂಸ್ಥೆ ಅಧ್ಯಕ್ಷ, ಬಿಇಒ, ಸುರೇಶ ಅಂಗಡಿ, ದ್ವಾರಕೀಶರೆಡ್ಡಿ, ಸಿಬ್ಬಂದಿ ಅಭಿನಂದಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.