ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಮಾನತೆಗೆ ಹೋರಾಡಿದ್ದ ಅಂಬಿಗರ ಚೌಡಯ್ಯ

Vishwanath S
Updated On : 22 Jan 2014, 2:30 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 21
ಅಸ್ಪೃಶ್ಯತೆ ವಿರುದ್ಧ ಹಾಗೂ ಸಮಾನತೆಗಾಗಿ 12ನೇ ಶತಮಾನದಲ್ಲಿಯೆ ಹೋರಾಡಿದ ಧೀಮಂತರ ಸರಣಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನಿಲ್ಲುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಅಭಿಪ್ರಾಯಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ  ಪಾಲಿಕೆ ಸಹಯೋಗದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಚೌಡಯ್ಯನವರು ಸಮಾಜದ ಆರ್ಥಿಕ, ಸಾಮಾಜಿಕ ರಾಜಕೀಯ ಅಭಿವೃದ್ಧಿಗಾಗಿ ವಚನಗಳ ಮೂಲಕ ಜನ ಜಾಗೃತಿ ಮೂಡಿಸಿ ಉತ್ತಮ ದಾರ್ಶನಿಕರಾಗಿದ್ದರು ಎಂದರು.
ಬೆಳಗಾವಿಯ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಅಂಬಿಗರ ಚೌಡಯ್ಯ ಅವರು ಸಮಾಜವನ್ನು ಒಗ್ಗೂಡಿಸಿ, ಅಜ್ಞಾನ ಹೋಗಲಾಡಿಸಲು ಜೀವನವನ್ನೆ ಮುಡುಪಾಗಿಟ್ಟಿದ್ದರು.  ಸಮುದಾಯದ ಒಳಿತಿಗಾಗಿ ಹೋರಾಡುವ ವೈಚಾರಿಕ ಮನೋಭಾವವುಳ್ಳವರಾಗಿದ್ದ ಇವರು, ಸ್ವಹಿತಕ್ಕಾಗಿ ಬದುಕದೆ ಸಮಾಜದ ಹಿತಕ್ಕಾಗಿ ಬದುಕಬೇಕು. ಪರೋಪಕಾರದ ಗುಣ ಹೊಂದಿರಬೇಕು. ಸ್ವಧರ್ಮ ಪ್ರೀತಿಸಿ, ಪರಧರ್ಮ ಗೌರವಿಸಬೇಕೆಂದ ದಾರ್ಶನಿಕರಾಗಿದ್ದರು ಎಂದು ಹೇಳಿದರು.
ಎಂಬಿಎಸ್‌ಎಲ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕಾಳಪ್ಪ ಪತ್ತಾರ್, ಗಂಗಾಮತಸ್ಥ ಸಂಘದ ಅಧ್ಯಕ್ಷ ಮೌಲಾಲಿ ಮಾತನಾಡಿದರು. ವಿಜಯಕಿಶೋರ ಮತ್ತು ತಂಡದವರು ಹಾಡಿದ ವಚನಗಳು ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದವು. ಮಹಾನಗರ ಪಾಲಿಕೆ ಸದಸ್ಯ ಕೆ. ನಾಗರಾಜ್, ಬೆಣಕಲ್ ಬಸವರಾಜ್, ಪಂಪಾಪತಿ, ರಂಗಸ್ವಾಮಿ, ರಮೇಶ, ಸಮಾಜದ ಬಂಧುಗಳು, ವಿವಿಧ ಅಧಿಕಾರಿಗಳು ಇದ್ದರು. ಎಡಿಸಿ ಟಿ. ವೆಂಕಟೇಶ್ ಸ್ವಾಗತಿಸಿದರು. ವಿನೋದ್ ನಿರೂಪಿಸಿದರು. ಜಿಪಂ ಉಪಕಾರ್ಯದರ್ಶಿ ನಂದೀಶ್ ವಂದಿಸಿದರು. ಇದಕ್ಕು ಮುನ್ನ ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆ ನಗರದಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ಮಾಡಲಾಯಿತು.
ಕಲ್ಯಾಣ ಮಂಟಪಕ್ಕೆ ಅನುದಾನ
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ನಿರ್ಮಾಣದ ಹಂತದಲ್ಲಿರುವ ಗಂಗಾಪರಮೇಶ್ವರಿ ಕಲ್ಯಾಣ ಮಂಟಪದ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಅನುದಾನವನ್ನು ನೀಡುವ ಜತೆಗೆ ಕ್ಷೇತ್ರದ ಗಂಗಾಮತ ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸುವುದಾಗಿ ಶಾಸಕ ಎಸ್. ಭೀಮಾನಾಯ್ಕ ಭರವಸೆ ನೀಡಿದರು.
ಮಂಗಳವಾರ ಸಂಜೆ ಇಲ್ಲಿನ ರಾಮನಗರದ ಈಶ್ವರ ದೇವಸ್ಥಾನದ ಬಳಿಯ ಎಂ.ಪಿ. ಪ್ರಕಾಶ ನಗರದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗಂಗಾಪರಮೇಶ್ವರಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ರು. 10 ಲಕ್ಷ ನೀಡುವೆ, ನಂತರ ರು. 10 ಲಕ್ಷ ನೀಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಇದಕ್ಕು ಮುನ್ನ ಹಗರಿ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ನೇರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ತಾಲೂಕು ಕಚೇರಿ ಸರ್ಕಲ್, ಬಸವೇಶ್ವರ ಬಜಾರ, ಬೈಪಾಸ್, ನೇತಾಜಿ ರಸ್ತೆ, ಸಿನಿಮಾ ಸರ್ಕಲ್, ಕೂಡ್ಲಿಗಿ ಸರ್ಕಲ್, ರೈತರ ಓಣಿ ಮೂಲಕ ಮೆರವಣಿಗೆ ಸಾಗಿತು.
ಹಳೇ ಹಗರಿಬೊಮ್ಮನಹಳ್ಳಿ ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ. ವಿಶ್ವಮೂರ್ತಿ ಉಪನ್ಯಾಸ ನೀಡಿದರು. ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ಸದಸ್ಯರಾದ ಹೇಮ್ಲವ್ವ ಕೃಷ್ಣನಾಯ್ಕ, ರೋಗಾಣಿ ಹುಲುಗಪ್ಪ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ, ಉಪಾಧ್ಯಕ್ಷೆ ನಾಗರತ್ನ ವೆಂಕಟೇಶ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಪವಾಡಿ ಗಂಗಮ್ಮ, ಮಂಜುಳಾ ಕೃಷ್ಣನಾಯ್ಕ, ಎಪಿಎಂಸಿ ಅಧ್ಯಕ್ಷ ಟಿ. ಬುಳ್ಳಪ್ಪ, ಸದಸ್ಯ ಹೂಗಾರ ಮಲ್ಲಿಕಾರ್ಜುನ, ಗಂಗಾಮತ ಸಮಾಜದ ಅಧ್ಯಕ್ಷ ಅಂಬಾಡಿ ನಾಗರಾಜ, ಬಾರಿಕರ ಬಾಪೂಜಿ, ಡಾ. ಅಂಬಣ್ಣ, ಬಾರಿಕರ ನಿಂಗಪ್ಪ, ಪಿಗ್ಮಿ ಹನುಮಂತಪ್ಪ, ಅಂಬಿಗರ ಹುಡುಚಪ್ಪ, ಸರ್ದಾರ ಗೋವಿಂದಪ್ಪ, ಶ್ರೀನಿವಾಸ, ಬಿ. ಮಾರುತೇಶ, ಮಾಲವಿ ಚಂದ್ರಪ್ಪ, ಬಾರಿಕರ ಹುಲುಗಪ್ಪ, ಡ್ರೈವರ್ ಚಂದ್ರು, ಅಂಬಾಡಿ ಪರಶುರಾಮ ಇದ್ದರು.
ತಹಸೀಲ್ದಾರ್ ಏಜಾಜ್‌ಬೇಗ್ ಪ್ರಾಸ್ತವಿಕ ಮಾತನಾಡಿದರು. ಬಿಇಒ ಕೆ. ರಾಮನಗೌಡ ಸ್ವಾಗತಿಸಿದರು. ಬಿ. ಕೊಟ್ರಪ್ಪ ನಿರೂಪಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಪ್ರಾರ್ಥಿಸಿದರು.
ಚೌಡಯ್ಯ ಸಾಹಿತ್ಯ ಶ್ರೇಷ್ಠ
ಕೊಟ್ಟೂರು: ಅಂಬಿಗರ ಚೌಡಯ್ಯನವರ ಸಾಹಿತ್ಯ ವಚನ ಸಾಹಿತ್ಯದಲ್ಲೆ ಶ್ರೇಷ್ಠ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ತೀಡಲು ಸರಳ ಮಾತುಗಳ ಮೂಲಕ ಎಲ್ಲರ ಆಳವನ್ನು ಅವರು ತಲುಪಿದ್ದಾರೆ. ಚೌಡಯ್ಯನವರ ದಾರ್ಶನಿಕ ವ್ಯಕ್ತಿತ್ವ ಸಮಾಜಕ್ಕೆ ಮಾದರಿ ಎಂದು ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್ ಹೇಳಿದರು.
ಇಲ್ಲಿನ ಬಾರಿಕೆರ ಓಣಿಯ ದುರುಗಮ್ಮನ ಗುಡಿ ಬಳಿ ಗಂಗಾಮತಸ್ಥ ಸಂಘ ಮಂಗಳವಾರ ಆಯೋಜಿಸಿದ್ದ ಕೊಟ್ಟೂರು ಹೋಬಳಿ ಮಟ್ಟದ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಸಾಮರಸ್ಯ ಬದುಕಿನಲ್ಲಿ ಸಾರ್ಥಕತೆ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ತಮ್ಮ ಸಂಘಟನೆಗಳನ್ನು ಬಲಪಡಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿ ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂಘದ ಗುಡೇಕೋಟೆ ಸುರೇಶ್ ಮಾತನಾಡಿದರು. ಮಹಲ್ ಮಠದ ಶಂಕರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠಾಧ್ಯಕ್ಷ ಪ್ರಶಾಂತ ಸಾಗರ ಸ್ವಾಮೀಜಿ, ಕೊಟ್ಟೂರು ಕಟ್ಟೆಮನಿ ಹಿರೇಮಠಾಧ್ಯಕ್ಷ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಪಪಂ ಅಧ್ಯಕ್ಷೆ ಅನಸೂಯಾ ಸೆರೆಗಾರ್, ಸದಸ್ಯರಾದ ಡಿಶ್ ಮಂಜುನಾಥ, ಬಾವಿಕಟ್ಟಿ ಶಿವಾನಂದ, ಪ್ರಭುದೇವ್, ಅನಿಲ್ ಹೊಸಮನಿ ಪಾಲ್ಗೊಂಡಿದ್ದರು. ಬಿ. ಪರಶುರಾಂ ಸ್ವಾಗತಿಸಿದರು. ಬಿ. ರಾಜಪ್ಪ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಚ್. ಮಯೂರಪ್ಪ ವಂದಿಸಿದರು. ಬಿ. ಕೊಟ್ರೇಶ್ ನಿರೂಪಿಸಿದರು.
ಒಂದು ಜಾತಿಗೆ ಸೀಮಿತರಲ್ಲ
ಹೊಸಪೇಟೆ: ಕೆಳ ಸಮುದಾಯಕ್ಕೆ ಸೇರಿದ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಲು ಶ್ರಮಿಸಿದ್ದರು. ಅಂಬಿಗರ ಚೌಡಯ್ಯನವರ ವಚನಗಳು ಕೇವಲ ಒಂದು ಜಾತಿಗೆ ಸೀಮಿತವಾಗದೆ ಸಮಗ್ರ ದಮನಿತ ಸಮುದಾಯಗಳಿಗೆ ಅನುಕರಣೆಯಾಗಿವೆ ಎಂದು ಪರಮೇಶ್ವರಪ್ಪ ಹೇಳಿದರು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಮಲ್ಲಿಕಾರ್ಜುನ ಗೌಡ, ಜಿ. ಯಂಕಪ್ಪ, ಕೆ. ರಿಂದಪ್ಪ, ಬಿ. ಫಕ್ಕೀರಪ್ಪ, ಕೆ. ರಾಮಲಿಂಗಪ್ಪ, ಕೆ. ಶ್ರೀನಿವಾಸ, ಕೆ. ಯಂಕಪ್ಪ, ಕೆ. ಕೊಮಾರೆಪ್ಪ, ಕೆ. ಬಸಪ್ಪ, ಕೆ. ಹೊನ್ನೂರಪ್ಪ, ಯೋಗೇಶ, ಪಿಡಿಒ ನಾಗರಾಜ ಇದ್ದರು.
ಚೌಡಯ್ಯ ನಿಷ್ಠುರವಾದಿ
ಕೂಡ್ಲಿಗಿ: ಸಮಾಜದಲ್ಲಿನ ಕ್ರೌರ್ಯ, ಹಿಂಸೆ, ಡಾಂಬಿಕತನವನ್ನು ಕಠೋರವಾಗಿ ಖಂಡಿಸಿದ ಬಸವಣ್ಣನ ಸಮಕಾಲೀನ ದಾರ್ಶನಿಕ ಅಂಬಿಗರ ಚೌಡಯ್ಯ, ನಿಷ್ಠುರವಾದಿತನದಿಂದಲೆ ಶರಣರಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದರು ಎಂದು ಕಂದಗಲ್ಲು ಗ್ರಾಪಂ ಅಧ್ಯಕ್ಷ ಕೆ. ಕೊಟ್ರೇಶ್ ಅಭಿಪ್ರಾಯಪಟ್ಟರು. ಅವರು ಮಂಗಳವಾರ ತಾಲೂಕಿನ ಗಜಾಪುರ ಗ್ರಾಮದಲ್ಲಿ ಗಂಗಾಮತಸ್ಥರ ಸಂಘ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ನಿಮಿತ್ತ ಅಂಬಿಗರ ಚೌಡಯ್ಯ ನಾಮಫಲಕಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು. ಕೆ. ಪರುಸಪ್ಪ ಮಾತನಾಡಿದರು. ತಳವಾರ ಮೂಗಪ್ಪ, ಅಂಬಳಿ ಲೋಕಪ್ಪ,  ಸಂಘದ ಅಧ್ಯಕ್ಷ ಗಾಳೆಪ್ಪನವರ ಭೀಮಪ್ಪ, ಕಾರ್ಯದರ್ಶಿ ಬಾರಿಕರ ಮಂಜುನಾಥ, ಪಾಪಣ್ಣ, ಗುರಿಕಾರ ಹನುಮಂತಪ್ಪ, ಬಾರಿಕರ ಜ್ಯೋತಿ, ಬಾರಿಕರ ಮೂಗಮ್ಮ, ಎಚ್. ಹುಲುಗಪ್ಪ, ವಿ. ಲಕ್ಷ್ಮಿ ಗುರುವಪ್ಪ, ದೂಪದಹಳ್ಳಿ ಕೊಟ್ರೇಶ್, ಬಿ. ಸಿದ್ದಪ್ಪ, ಬಿ. ವಿಶ್ವನಾಥ, ಬಾರಿಕರ ಶಿವರಾಮಪ್ಪ, ಕಂಕ್ರಿ ಭರಮಪ್ಪ, ಗಂಟಿ ಹನುಮಂತಪ್ಪ, ಚಿಕ್ಕಪ್ಪರ ಕೊಟ್ರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement