ಟಾಟಾ ಗೋಲ್ಡ್ಪ್ಲಸ್: ಶೇ. 25ರಷ್ಟು ರಿಯಾಯಿತಿ
ಬಳ್ಳಾರಿ: ಟಾಟಾ ಗೋಲ್ಡ್ಪ್ಲಸ್ ಬಂಗಾರದ ಮಳಿಗೆಯಲ್ಲಿ ಹರಳು ಸಹಿತವಾದ ವಜ್ರಾಭರಣಗಳನ್ನು ಕೊಂಡರೆ ಗ್ರಾಹಕರಿಗೆ ಶೇ. 25ರಷ್ಟು ರಿಯಾಯ್ತಿ ನೀಡಲಾಗುತ್ತಿದ್ದು, ಈ ಅವಕಾಶ ಜ. 18ರಿಂದ ಮಾ. 2ರ ವರೆಗೆ ಮಾತ್ರ ಲಭ್ಯವಿದೆ ಎಂದು ಗೋಲ್ಡ್ಪ್ಲಸ್ ಸಂಸ್ಥೆಯ ಪ್ರಾದೇಶಕ ವ್ಯವಹಾರಗಳ ಮುಖ್ಯ ವ್ಯವಸ್ಥಾಪಕ ಸೋಮಶೇಖರ್ ತಿಳಿಸಿದ್ದಾರೆ.
ನಗರದಲ್ಲಿ ಗೋಲ್ಡ್ಪ್ಲಸ್ ಮಳಿಗೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಟಾಟಾ ಗೋಲ್ಡ್ಪ್ಲಸ್ ಗ್ರಾಹಕರು ಸಂಭ್ರಮದಿಂದ ಹೊಸ ವರ್ಷ ಆಚರಿಸಬೇಕು ಎಂಬ ಆಶಯದಲ್ಲಿ ಇಂತಹ ರಿಯಾಯ್ತಿಯನ್ನು ತರಲಾಗಿದೆ. ವಜ್ರ, ಡೈಮಂಟೈನ್ ಆಭರಣಗಳ ಮೇಲೆ ಶೇ. 25 ಹಾಗೂ ಬಣ್ಣದ ಹರಳುಗಳ ಮೇಲೆ ಶೇ. 15ರಷ್ಟು ರಿಯಾಯಿತಿ ನೀಡಲಾಗುವುದು. ಭಿನ್ನ ವಿನ್ಯಾಸ ಮತ್ತು ಸಾಂಪ್ರದಾಯಿಕ ಕಸೂತಿಯಿಂದ ಜನಪ್ರಿಯವಾಗಿರುವ ಗೋಲ್ಡ್ ಪ್ಲಸ್ನಲ್ಲಿ ಕಿವಿಯೋಲೆ, ಕತ್ತಿನಹಾರ, ಪದಕ, ಬಳೆ, ಉಂಗುರ ಸೇರಿದಂತೆ ಸುಮಾರು 1200 ಬಗೆಯ ವಿವಿಧ ಉತ್ಪನ್ನಗಳು ದೊರೆಯಲಿದ್ದು, ಅವುಗಳ ಮೇಲೆ ರಿಯಾಯ್ತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಹಕರು ಹರಳುಗಳ ಮೇಲೆ ಶೇ. 100ರಷ್ಟು ಮೌಲ್ಯವನ್ನು ವಿನಿಮಯದ ವೇಳೆ ಪಡೆದುಕೊಳ್ಳಬಹುದು. ಟಾಟಾ ಗೋಲ್ಡ್ಪ್ಲಸ್ ಮಳಿಗೆಯಲ್ಲಿ ಕೊಂಡರೆ ಮಾತ್ರ ಹರಳುಗಳನ್ನು ಶೇ. 100 ದರದಲ್ಲಿ ಹಿಂದಕ್ಕೆ ಪಡೆಯಲಾಗುವುದು ಎಂದರು. ಪ್ರತಿ ತಿಂಗಳು ಒಂದಷ್ಟು ಹಣ ಉಳಿತಾಯ ಮಾಡಿ ಒಂದು ವರ್ಷದ ಬಳಿಕ ಬಂಗಾರವನ್ನು ಖರೀದಿಸುವ ಯೋಜನೆಯನ್ನು ಪರಿಚಯಿಸಲಾಗಿದೆ. ಇದಕ್ಕೆ ಬಳ್ಳಾರಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಬಳ್ಳಾರಿಯಲ್ಲಿ ತಮ್ಮ ಮಳಿಗೆಗೆ ಗ್ರಾಹಕರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ವಜ್ರಾಭರಣಗಳು ಹಂಪಿಯ ವಿಶಿಷ್ಟ ಕಲಾ ಕುಸರಿಯನ್ನು ಹೊಂದಿವೆ. ಹೊಸದಾಗಿ ಏನಾದರೂ ಗ್ರಾಹಕರಿಗೆ ನೀಡಬೇಕು ಎಂಬ ಉದ್ದೇಶದಿಂದಾಗಿ ವಿಭಿನ್ನ ಕುಸರಿಯಲ್ಲಿ ಆಭರಣಗಳ ಉತ್ಪನಗಳಲ್ಲಿ ಮಳಿಗೆಯಲ್ಲಿ ಲಭ್ಯ ಇವೆ. ಜನರ ವಿಶ್ವಾಸವೇ ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟಾಟಾ ಗೋಲ್ಡ್ಪ್ಲಸ್ನ ಅರ್ಜುನ್, ಜೋಸೆಫ್, ವರ ಪ್ರಸಾದ್, ಶಿವಪ್ರಸಾದ್ ಸೇರಿದಂತೆ ಇತರರು ಇದ್ದರು.