ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮೋಕಾ: ಮಲ್ಲಿಕಾರ್ಜುನ ಬಂಡೆಗೆ ಶ್ರದ್ಧಾಂಜಲಿ

Mainashree
Updated On : 23 Jan 2014, 10:56 am

ಬಳ್ಳಾರಿ: ಜೈ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ತಾಲೂಕಿನ ಮೋಕಾ ಗ್ರಾಮದಲ್ಲಿ ಗುಲ್ಬರ್ಗ ಪೊಲೀಸ್ ಅಧಿಕಾರಿ ದಿ. ಮಲ್ಲಿಕಾರ್ಜುನ್ ಬಂಡೆ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆರಂಭದಲ್ಲಿ ಬಂಡೆ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ, ಮೌನಾಚರಣೆ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜೈ ಕರವೇ ತಾಲೂಕು ಅಧ್ಯಕ್ಷ ಕೆ. ಪೊಂಪನಗೌಡ ಮಾತನಾಡಿ, ಬಂಡೆ ಅವರ ಸಾವು ಇಲಾಖೆಗೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಕಾರ್ಯದಕ್ಷತೆ ಮತ್ತು ಧೈರ್ಯ ಯುವಕರಿಗೆ ಮಾದರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ನಾಗರಾಜ, ಮೋಕಾ ಪೊಲೀಸ್ ಠಾಣೆ ಪಿಎಸ್ಐ ಶಿವಾನಂದ ಶೆಟ್ಟಿ, ಎಎಸ್ಐಗಳಾದ ನಾಗರಾಜ, ಗುರುರಾಜ್ ಕುಲಕರ್ಣಿ, ಸಿಬ್ಬಂದಿ ವೆಂಕೋಜಿರಾವ್, ಸುರೇಶ್, ರಾಜು ಮತ್ತು ಗ್ರಾಮದ ಮುಖಂಡ ಪಾಂಡುರಂಗಪ್ಪ, ಪಿ. ಹುಲುಗಪ್ಪ, ಟಿ. ರಾಮಯ್ಯ, ಮಲ್ಲಿಕಾರ್ಜುನ, ಗಾದಿಲಿಂಗಪ್ಪ, ಸಿಂಧುವಾಳ ಈರಣ್ಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement