ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 23 Jan 2014, 10:40 am

ಇಂದು ತರಬೇತಿ ಕಮ್ಮಟ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದಿಂದ ಭಾಷಾಂತರ ಮಾಹಿತಿ ಕ್ರೋಡೀಕರಣ ತರಬೇತಿ ಕಮ್ಮಟ ವಿವಿಯ ಭುವನ ವಿಜಯದಲ್ಲಿ ಜ. 23ರಿಂದ 26ರ ವರೆಗೆ ನಡೆಯಲಿದೆ. ಜ. 23ರಂದು ಬೆಳಗ್ಗೆ 11ಕ್ಕೆ ಭಾಷಾಂತರ ತಜ್ಞ ಅಬ್ದುಲ್ ರೆಹಮಾನ್ ಪಾಷಾ ತರಬೇತಿ ಕಮ್ಮಟ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಚಂದ್ರಕಾಂತ ಪೋಕಳೆ, ಮೀನಾ ವಾಂಗೀಕರ್, ಪಾರ್ವತಿ ಐತಾಳ್, ಎಲ್.ಸಿ. ಸುಮಿತ್ರಾ, ತೇರಳಿ ಶೇಖರ್, ಎಚ್.ಎಂ. ಕುಮಾರಸ್ವಾಮಿ, ಸರಜೂ ಕಾಟ್ಕರ್, ಡಾ. ವಿಠಲರಾವ್ ಗಾಯಕ್ವಾಡ್, ಡಾ.ಎಂ. ಉಷಾ, ಡಾ.ಕೆ.ಸಿ. ಶಿವಾರೆಡ್ಡಿ, ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಮೋಹನ ಕುಂಟಾರ್ ಸೇರಿದಂತೆ ಇತರರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಪಾಲಕರ ಪತ್ತೆಗೆ ಮನವಿ
ಬಳ್ಳಾರಿ: ನಗರದ ಓಪಿಡಿ ಬಳಿಯಿರುವ ಮಿಶಿನರಿ ಆಫ್ ಚಾರಿಟೀಯ ಮದರ್ ತೆರೆಸಾ ಆಶ್ರಮದ ದ್ವಾರದ ಬಳಿ ಡಿಸೆಂಬರ್ 18ರಂದು 2 ತಿಂಗಳಿನ ಗಂಡು ಮಗುವೊಂದು ದೊರೆತಿದ್ದು, ಪಾಲಕರ ಪತ್ತೆಗೆ ಸಹಕರಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೊಹ್ಮದ್ ಸರ್ವರ್ ಮನವಿ ಮಾಡಿದ್ದಾರೆ. ಕಂದು ಮೈಬಣ್ಣ ಹೊಂದಿರುವ ಈ ಮಗುವಿನ ತುಟಿ ಸೀಳಿದೆ.  ವಾರಸುದಾರರ ಬಗ್ಗೆ ಮಾಹಿತಿ ತಿಳಿದವರು ಅಧೀಕ್ಷಕರು, ಸಿಂಚನ ಸರ್ಕಾರಿ ಶಿಶು ಗೃಹ, ಸ್ತ್ರೀಸೇವಾನಿಕೇತನ, ಎಸ್‌ಪಿ ಸರ್ಕಲ್, ಬಳ್ಳಾರಿ-583103 ಅಥವಾ ದೂ: 08392-241373 ಅನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಪಂಗೆ ಅವಿರೋಧ ಆಯ್ಕೆ
ಹೂವಿನಹಡಗಲಿ: ತಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮಾ ಅವರ ರಾಜೀನಾಮೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಗೊಂಡು ಇಟಿಗಿ ಕ್ಷೇತ್ರದ ತಾಪಂ ಸದಸ್ಯೆ ಎಂ.ಜೆ. ಲಕ್ಷ್ಮಿ ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 15 ಸದಸ್ಯರ ಬಲ ಹೊಂದಿದ ತಾಪಂನಲ್ಲಿ ಚುನಾವಣೆ ಸಂದರ್ಭದಲ್ಲಿ 12 ಸದಸ್ಯರು ಹಾಜರಿದ್ದು, ಎಂ.ಜೆ. ಲಕ್ಷ್ಮಿ ಅವಿರೋಧ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದಾರೆಂದು ಹೊಸಪೇಟೆ ಎಸಿ ಸುನೀಲ್‌ಕುಮಾರ್ ಘೋಷಿಸಿದರು. ಎಂ.ಜೆ. ಲಕ್ಷ್ಮಿ ಲೋಕೇಶ್‌ರವರಿಗೆ ಸುನೀಲ್ ಕುಮಾರ್, ಪ್ರಭಾರಿ ಇಒ ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಪರಮೇಶ್ವರಪ್ಪ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಅಟವಾಳಗಿ ಕೊಟ್ರೇಶ್, ಇಟಿಗಿ ರಾಮನಗೌಡ, ನಟರಾಜ್, ಎಸ್. ಹಾಲೇಶ್, ಕೆ. ಪತ್ರೇಶ್, ತಾಪಂ ಸದಸ್ಯರಾದ ಬಿ. ಹುಲುಗಪ್ಪ, ಮಂಗಳಾ ಹಾಲೇಶ್, ಹರವಿ ಪ್ರಕಾಶ್, ಎ.ಎಂ. ಶಾಂತಯ್ಯ, ಕೃಷ್ಣಾನಾಯ್ಕ, ದುರುಗಮ್ಮ, ವಾಲ್ಯಾನಾಯ್ಕ, ಸಾವಿತ್ರಮ್ಮ ಮಂಜುನಾಥ ಅಭಿನಂದಿಸಿದರು.
ಅಂಬಿಗರ ಚೌಡಯ್ಯ ಜಯಂತಿ
ಹೊಸಪೇಟೆ: ಅಂಬಿಗರ ಚೌಡಯ್ಯ ಜಯಂತಿಯನ್ನು ಕಮಲಾಪುರ ಪಟ್ಟಣದ ಗಂಗಾಮತಸ್ಥ ಸಮಾಜದವರು ಆಚರಿಸಿದರು.
ಕಾರ್ಯಕ್ರಮದ ಪ್ರಯುಕ್ತ ಮೆರವಣಿಗೆಯನ್ನು ಪ್ರತಿ ವರ್ಷದಂತೆ ಹಂಪಿ ರಸ್ತೆಯಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಭಾವಚಿತ್ರದ ಮೆರವಣಿಗೆ ಆರಂಭಗೊಂಡು, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಹೊಸಬಸ್ ನಿಲ್ದಾಣ, ಕೃಷ್ಣದೇವರಾಯ ವೃತ್ತ, ಚೌಡಿಕೇರಿ, ವಾಲ್ಮೀಕಿ ವೃತ್ತ, ಗೋನಾಳಕೇರಿ, ಊರಮ್ಮಬಯಲು ಮೂಲಕ ಕಾರ್ಯಕ್ರಮದ ಸ್ಥಳವಾದ ಕೆರೆಯ ಅಂಗಳದಲ್ಲಿ ಸಮಾರೋಪಗೊಂಡಿತು.
ಸಮಾಜದ ಕಮಲಾಪುರದ ಘಟಕದ ಅಧ್ಯಕ್ಷ ಎ.ಕೆ ರಾಮಸ್ವಾಮಿ, ಬಿ ತಿಪ್ಪೇಸ್ವಾಮಿ, ಕೋಣಗಿ ನಾರಾಯಣಪ್ಪ, ಎ.ಕೆ. ಕೃಷ್ಣಮೂರ್ತಿ, ಸಮಾಜದ ಮುಖಂಡರಾದ ಗಂಗಪ್ಪ, ಉದ್ದಾನಪ್ಪ, ಮಲ್ಲಪ್ಪ, ಮಾರೆಪ್ಪ, ಚಂದಾಲಿಂಗಪ್ಪ, ಕಟ್ಟೆ ಉಡಚಪ್ಪ ಸೇರಿದಂತೆ ಸಮಾಜದ ಬಂಧುಗಳು ಭಾಗವಹಿಸಿದ್ದರು.
ಮಹಿಳೆಯರು ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಿ: ಪ್ರೇಮಕ್ಕ
ಬಳ್ಳಾರಿ: ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಪ್ರೇಮಕ್ಕ ಅಂಗಡಿ ತಿಳಿಸಿದರು.
ನಗರದ ಬಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಳ್ಳಾರಿ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜದ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ. ಮಹಿಳೆಯರು ಸುಶಿಕ್ಷಿತರಾಗಿ, ಸ್ವಾವಲಂಬಿ ಜೀವನ ನಡೆಸಬೇಕು ಎಂದರು. ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಲ್ಲಂ ಗುರುಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ರಾಜ್ಯ ಕಾರ್ಯದರ್ಶಿ ಗವಿಸಿದ್ಧಪ್ಪ ಅಂಗಡಿ ಮಾತನಾಡಿದರು. ಈ ಸಂದರ್ಭ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಾಹುಕಾರ ಸತೀಶ್ ಬಾಬು, ರೂಪನಗುಡಿ ಬಸವರಾಜ್, ಕೊಂಡಕುಂದಿ ಚಂದ್ರನಾಥ್, ಹಾವಿನಾಳ್ ಬಸವರಾಜ್, ವಕೀಲ ಬಿ.ವಿ ಬಸವರಾಜ್, ಸವಿತಾ ಸತೀಶ್‌ಬಾಬು, ಭವಾನಿ ಬಸವರಾಜ್, ಆರ್. ಜಯಲಕ್ಷ್ಮಿ ಬಸವರಾಜ್, ಮಂಗಳಗೌರಿ ಪ್ರಭಾಕರ್ ಸೇರಿದಂತೆ ಮತ್ತಿತರರು ಇದ್ದರು. ಕೆ.ಎಂ. ಶಿವಲೀಲಾ ನಿರೂಪಿಸಿದರು. ಕೋರಿ ಪ್ರಭಾಕರ ಸ್ವಾಗತಿಸಿದರು. ಮಹಾನಂದಿ ಬಸವಲಿಂಗಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement