ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಲೆ ಆರೋಪಿಗಳ ಬಂಧನ: ಸಿಪಿಐ

Mainashree
Updated On : 24 Jan 2014, 10:49 am

ಕೊಟ್ಟೂರು: ಅಂಬಳಿಯಲ್ಲಿ ನಡೆದ ಸಣ್ಣನಿಂಗಪ್ಪನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರಿಸಿಕೊಂಡಿದ್ದ ಗೌರಿಹಳ್ಳಿ ಮಂಜುನಾಥ, ಕೋಟೆಪ್ಪ ಎಂಬ ಆರೋಪಿಗಳನ್ನು ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಎಲ್ಲ 9 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಿಪಿಐ ಎಸ್. ಲಾಲ್ಯನಾಯ್ಕ ತಿಳಿಸಿದರು.
ಗುರುವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಕೊಲೆ ಪ್ರಕರಣಕ್ಕೆ ಗೌರಿಹಳ್ಳಿ ಮಂಜುನಾಥ ಮತ್ತು ಕೋಟೆಪ್ಪ ಅವರ ಪ್ರಚೋದನೆ ಪ್ರಮುಖ ಕಾರಣವೆಂದು ಆರೋಪಿಸಿ ಕೊಲೆಗೀಡಾದ ಸಣ್ಣನಿಂಗಪ್ಪನ ಕಡೆಯವರು ದೂರು ಸಲ್ಲಿಸಿ, ಈ ಇಬ್ಬರ ಬಂಧನಕ್ಕೆ ಒತ್ತಾಯಿಸುತ್ತಿದ್ದರು. ಈ ಇಬ್ಬರು ಆರೋಪಿಗಳನ್ನು ಪ್ರಕರಣದ 8 ಮತ್ತು 9ನೇ ಆರೋಪಿಗಳನ್ನಾಗಿ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಘಟನೆ ನಡೆದ ಗಳಿಗೆಯಿಂದ ಈ ಆರೋಪಿಗಳು ತಲೆಮರಿಸಿಕೊಂಡಿದ್ದರು. ಬುಧವಾರ ದೂರವಾಣಿ ಕರೆಯೊಂದರ ಮೂಲಕ ವ್ಯಕ್ತಿಯೊಬ್ಬರು ಈ ಇಬ್ಬರು ಆರೋಪಿಗಳು ಇರುವ ಸ್ಥಳದ ಮಾಹಿತಿ ನೀಡಿದರು. ಈ ಮಾಹಿತಿಯನ್ವಯ ಸಿಬ್ಬಂದಿಯೊಂದಿಗೆ ತಾವು ಹೊಸಪೇಟೆಗೆ ತೆರಳಿ ಅಲ್ಲಿನ ವಿಶ್ವ ಲಾಡ್ಜ್‌ನಲ್ಲಿ ತಂಗಿದ್ದ ಇವರನ್ನು ವಶಕ್ಕೆ ಪಡೆದುಕೊಂಡೆವು. ಇವರನ್ನು ಇದೀಗ ನ್ಯಾಯಾಲಯ ಜ. 24ರ ವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲು ಆದೇಶಿಸಿದ್ದು, ಹೂವಿನಹಡಗಲಿಯ ಉಪ ಬಂಧಿಖಾನೆಯಲ್ಲಿ ಇರಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement